Saturday 5 January 2019

ಭಾರತದಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗವೇ ಇಲ್ಲ: ನಾಸಿರುದ್ದೀನ್ ಶಾ ಬೇಸರ.
ಇತ್ತೀಚೆಗಷ್ಟೇ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ, ಈಗ ಮತ್ತೊಮ್ಮೆ ಭಾರತದ ಬಗ್ಗೆ ಮಾತನಾಡಿದ್ದಾರೆ. 

ಈ ಹಿಂದೆ ಭಾರತದಲ್ಲಿ ಕೆಲವರಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದ್ದ ನಾಸಿರುದ್ದೀನ್ ಶಾ, ಈಗ ಭಾರತದಲ್ಲಿ ಅಭಿಪ್ರಾಯ ಭೇದಕ್ಕೆ ಜಾಗವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ನಾಸಿರುದ್ದೀನ್ ಶಾ, ಹಕ್ಕುಗಳನ್ನು ಯಾರು ಕೇಳುತ್ತಾರೋ ಅವರಿಗೆ ಬೀಗ ಜಡಿಯಲಾಗುತ್ತದೆ, ನಟರು, ಕಲಾವಿದರು, ಸಾಹಿತಿಗಳು, ವಿದ್ವಾಂಸರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಇಷ್ಟೇ ಅಲ್ಲದೇ ಪತ್ರಕರ್ತರನ್ನೂ ಸಹ ಸುಮ್ಮನಾಗಿಸಲಾಗುತ್ತಿದೆ ಎಂದು ನಾಸಿರುದ್ಧೀನ್ ಶಾ ಆರೋಪಿಸಿದ್ದಾರೆ. 
ನಾಸಿರುದ್ದೀನ್ ಶಾ ಅವರ ಪ್ರಕಾರ, ದೇಶದಲ್ಲಿ ದ್ವೇಷದ ಗೋಡೆಗಳನ್ನು ಧರ್ಮದ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಧರ್ಮದ ಹೆಸರಿನಲ್ಲಿ ಮುಗ್ಧ ಜನರ ಹತ್ಯೆಗಳಾಗುತ್ತಿವೆ, ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಮನೆ ಮೇಲೆ ರೇಡ್ ಗಳಾಗುತ್ತಿವೆ ಪರವಾನಗಿಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ನಾಸಿರುದ್ದೀನ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

No comments:

Post a Comment

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್...