ಬೆಂಗಳೂರು: ಡಾ. ರಾಜ್ ಕುಮಾರ್ ಅಭಿನಯದ "ಹೊಸಬೆಳಕು" ಚಿತ್ರದ ಪ್ರಸಿದ್ದ ಗೀತೆ "ಹೊಸಬೆಳಕು ಮೂಡುತಿದೆ...." ಇದೀಗ ಅವರ ಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ "ಕವಚ"ದಲ್ಲಿ ರೀಮಿಕ್ಸ್ ರೂಪದಲ್ಲಿ ಹೊಸದಾಗಿ ಮೂಡಿ ಬರುತ್ತಿದೆ. "ಈ ರೆಟ್ರೋ ಟ್ರ್ಯಾಕ್ ಅನ್ನು ಕವಚದಲ್ಲಿ ಕಥೆಗೆ ಅನುಗುಣವಾಗಿ ಮರುಸೃಷ್ಟಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಜಿವಿಆರ್ ವಾಸು ಹೇಳಿದ್ದಾರೆ. ಹಾಡಿನ ಹೊಸ ಆವೃತ್ತಿಯು ಅರ್ಜುನ್ ಜನ್ಯ ಸಂಗೀತ ಹೊಂದಿದ್ದರೆ ವಿಜಯ್ ಪ್ರಕಾಶ ಅವರ ಕಠಸಿರಿಯಲ್ಲಿ ಒಡಮೂಡಿದೆ.
"ಒಪ್ಪಂ"ನ ಯಥಾವತ್ ನಕಲಲ್ಲ...!
ಶಿವರಾಜ್ ಕುಮಾರ್ ಅಭಿನಯದ "ಕವಚ" ಚಿತ್ರ ಮೋಹನ್ ಲಾಲ್ ಅಭಿನಯದ ಮಲಯಾಳಂ ನ "ಒಪ್ಪಂ" ನ ಯಥಾವತ್ ನಕಲಲ್ಲ ಎಂದು ನಿರ್ದೇಶಕ ವಾಸು ಹೇಳಿದ್ದು ಚಿತ್ರ "ಒಪ್ಪಂ" ರೀಮೇಕ್ ಆಗಿದ್ದರೂ ಕನ್ನಡದ ಸೊಗಡು ಹೊಂದಿರಲಿದೆ. ನಟ ಶಿವರಾಜ್ ಕುಮಾರ್ ಯಾವುದೇ ಕಾರಣಕ್ಕೆ ರೀಮೇಕ್ ಚಿತ್ರ ಅಥವಾ ಯಥಾವತ್ ಚಿತ್ರಕ್ಕೆ ಇಒಪ್ಪಿಲ್ಲ, ಚಿತ್ರಕಥೆಯನ್ನು ಮರುಸೃಷ್ಟಿಸಿದ ಬಳಿಕವೇ ಅವರು ಅಭಿನಯಕ್ಕೆ ಒಪ್ಪಿದ್ದಾರೆ.ಕನ್ನಡ ಚಿತ್ರ ಮೂಲ ಚಿತ್ರಕ್ಕಿಂದ ಅರ್ಧದಷ್ಟು ಪ್ರಮಾಣದಲ್ಲಿ ಭಿನ್ನವಾಗಿದ್ದು ಸಾಹಸ, ಥ್ರಿಲ್ಲಿಂಗ್ ಕಥೆಯೊಂದನ್ನು ಶಿವಣ್ಣನ ಅಭಿಮಾನಿಗಳು ಎದುರು ನೋಡಬಹುದು" ನಿರ್ದೇಶಕ ವಿವರಿಸಿದ್ದಾರೆ.
ಶಿವಣ್ಣನ "ಕವಚ" ಇದೇ ಜನವರಿ 18ರಂದು ಬಿಡುಗಡೆಯಾಗುತ್ತಿದ್ದು ಈ ವರ್ಷದ ಬಹು ನಿರೀಕ್ಷಿತ ಚಿತ್ರದಲ್ಲಿ ಒಂದು ಎನ್ನಲಾಗಿದೆ.ಚಿತ್ರದಲ್ಲಿ ಶಿವರಾಜ್ ಕುಮಾರ್ ದೃಷೀಹೀನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಓರ್ವ ಯುವತಿಯನ್ನು ಸರಣಿ ಹಂತಕನಿಂದ ಪಾರು ಮಾಡುವ ಪಾತ್ರ ಇದಾಗಿದೆ.
ಕೃತ್ತಿಕಾ ಜಯಕುಮಾರ್, ಇಶಾ ಕೋಪ್ಟಿಕರ್, ಬೇಬಿ ಮೀನಾಕ್ಷಿ, ವಸಿಷ್ಟ ಸಿಂಹ, ಜಯಪ್ರಕಾಶ್ ಹಾಗೂ ತಬಲ ನಾಣಿ ಸೇರಿ ಅನೇಕರು ಚಿತ್ರದಲ್ಲಿ ಕಾಣಿಸಿಕೊಳ್ಳೂತ್ತಿದ್ದಾರೆ. ಎಂವಿವಿ ಸತ್ಯನಾರಾಯಣ ಹಾಗೂ ಎ. ಸಂಪತ್ ನಿರ್ಮಾಣದಲ್ಲಿ ಹಯಗ್ರೀವ ಮೂವಿ ಅಧಿಷ್ಠಾನದ ಲಾಂಛನದಲ್ಲಿ ಚಿತ್ರ ತೆರೆಗೆ ಆಗಮಿಸಲಿದೆ.
No comments:
Post a Comment