Thursday 3 January 2019

ನಾನು ತಪ್ಪು ಮಾಡಿಲ್ಲ, ಹಾಗಾಗಿ ಭಯವಿಲ್ಲ, ಐಟಿ ತನಿಖೆಗೆ ಸಹಕಾರ ನೀಡುವೆ: ಸುದೀಪ್

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ನಡೆದಿರುವ  ಐಟಿ ದಾಳಿಗೆ ಸ್ಟಾರ್ ನಟರು ಹಾಗೂ ನಿರ್ಮಾಪಕರು ಶಾಕ್ ಆಗಿದ್ದಾರೆ.

ಮನೆ ಮೇಲಿನ ಐಟಿ ದಾಳಿ ವಿಷಯ ಗೊತ್ತಾಗುತ್ತಿದ್ದಂತೆ ಮಂಡ್ಯ ಜಿಲ್ಲೆ ಪಾಂಡವಪುರ ಬಳಿ ಪೈಲ್ವಾನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಕಿಚ್ಚ ಸುದೀಪ್ , ಶೂಟಿಂಗ್  ಅರ್ಧಕ್ಕೆ ಬಿಟ್ಟು  ಬೆಂಗಳೂರಿನತ್ತ ದೌಡಾಯಿಸಿದ್ದಾರೆ.

ಜೆಪಿ ನಗರದಲ್ಲಿನ  ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹಾಗಾಗಿ ಭಯ ಪಡಬೇಕಾದ ಅಗತ್ಯವಿಲ್ಲ.  ಆದಾಯ ಇಲಾಖೆ ಅಧಿಕಾರಿಗಳು ನಡೆಸುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಐಟಿ ಅಧಿಕಾರಿಗಳು ಕಾಂಪೌಂಡ್ ಹಾರಿ ಮನೆಗೆ ಬಂದಿಲ್ಲ. ಗೇಟಿನ ಮೂಲಕವೇ ಮನೆ ಒಳಗಡೆ ಪ್ರವೇಶಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ತಾಯಿ ಒಬ್ಬರೇ ಇದುದ್ದರಿಂದ ಸ್ವಲ್ಪ ಗಾಬರಿಗೊಂಡಿದ್ದರು. ಹಾಗಾಗಿ ಶೂಟಿಂಗ್ ಕೈ ಬಿಟ್ಟು  ಬೆಂಗಳೂರಿಗೆ ಬಂದಿದ್ದಾಗಿ ಪ್ರತಿಕ್ರಿಯಿಸಿದರು..

ಈ ದಾಳಿ ಹಿಂದೆ ರಾಜಕೀಯ  ಕೈವಾಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸುದೀಪ್,  ಮೂರು ಚಿತ್ರಗಳ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ  ದಾಳಿ ನಡೆದಿದೆ. ಯಾವುದೇ ಸಾಕ್ಷ್ಯಧಾರ ಇಲ್ಲದೆ ಸುಖಾ ಸುಮ್ಮನೆ ಬೇರೆಯವರ ಆರೋಪ ಮಾಡುವುದು ಸರಿಯಲ್ಲ. ಹಾಗಾಗಿ ಆ ಕುರಿತ ಪ್ರಶ್ನೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ ಎಂದರು.

No comments:

Post a Comment

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್...