ಬೆಂಗಳೂರು: ಅಂತೂ ಮೂರು ದಿನಗಳ ಶೋಧದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ರಾಕಿಂಗ್ ಸ್ಟಾರ್ ಯಶ್ ಮನೆಯಿಂದ ಹೊರಹೋಗಿದ್ದು ಈ ಸಂಬಂಧ ಯಶ್ ಮಾತನಾಡಿದ್ದಾರೆ.
ಐಟಿ ಅಧಿಕಾರಿಗಳ ಶೋಧ ಅಂತ್ಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಶ್, ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ವಿಚಾರಕ್ಕೆ ನಮ್ಮ ಮನೆ ಮೇಲೆ ದಾಳಿ ನಡೆದಿದೆ ಅಂತೆಲ್ಲಾ ಊಹಾಪೋಹಾ ಹಬ್ಬಿಸಬಾರದು ಎಂದು ಹೇಳಿದ್ದಾರೆ.
ಐಟಿ ದಾಳಿ ಸಂಬಂಧ ಕೇವಲ ಊಹಾಪೋಹಗಳ ಮಾತೇ ಕೇಳಿ ಬರುತ್ತಿವೆ ಎಂದು ಯಶ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟು ಸಿಕ್ತು ಇಷ್ಟು ಸಿಕ್ತು ಎಂದು ಊಹಾಪೋಹಗಳನ್ನ ಹಬ್ಬಿಸಲಾಗಿದೆ. ಬುಲ್ ಷಿಟ್ ಗಳನ್ನ ತೋರಿಸಬಾರದು. ಎರಡು ದಿನ ನನ್ನ ಹೆಂಡತಿ ಹಾಗೂ ಮಗಳನ್ನು ಬಿಟ್ಟಿದ್ದದ್ದು ಕಷ್ಟವಾಗಿತ್ತು ಎಂದರು.
ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ಮುಂದೆ ಈ ವಿಚಾರಕ್ಕೆ ಕರೆದರೆ ಖಂಡಿತ ಹೋಗುತ್ತೇನೆ ಎಂದರು.
No comments:
Post a Comment