Sunday, 6 January 2019

ನಿಲ್ಲದ ಕೆಜಿಎಫ್ ಹವಾ: ಹಿಂದಿ ಸ್ಕ್ರೀನ್ ಗಳ ಸಂಖ್ಯೆ 780ರಿಂದ 951ಕ್ಕೆ ಏರಿಕೆ...!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ತನ್ನ ನಾಗಾಲೋಟ ಮುಂದುವರೆಸಿದ್ದು, ಹಿಂದಿ ಭಾಷೆಯ ಸ್ಕ್ರೀನ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯೊಂದಿಗೆ ದಾಖಲೆ ಬರೆದಿದ್ದ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ, ಗಲ್ಲ ಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದೆ. ಈ ವರೆಗೂ ಕೆಜಿಎಫ್ ಚಿತ್ರ ಹಿಂದಿ ಭಾಷೆಯಲ್ಲಿ ಮಾತ್ರವೇ ಸುಮಾರು 32 ಕೋಟಿ ಗೂ ಅಧಿಕ ರೂ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ಬಿಡುಗಡೆಯಾಗಿ ಮೂರು ವರಗಳೇ ಕಳೆದರೂ ಕೆಜಿಎಫ್ ಚಿತ್ರದ ಸ್ಕೀನ್ ಗಳ ಸಂಖ್ಯೆ ಕಡಿಮೆಯಾಗಿಲ್ಲ. ಬದಲಿಗೆ ಬಿಡುಗಡೆಯಾಗುತ್ತಿರುವ ಹೊಸ ಚಿತ್ರಗಳಿಗೂ ಸವಾಲೆಸೆಯುವಂತೆ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ.  ಡಿ. 28ರ ಶುಕ್ರವಾರ 1.25 ಕೋಟಿ ರೂ., ಶನಿವಾರ 1.75 ಕೋಟಿ ರೂ., ಭಾನುವಾರ 2.25 ಕೋಟಿ ರೂ., ಸೋಮವಾರ 1.50 ಕೋಟಿ ರೂ., ಮಂಗಳವಾರ 2.25 ಕೋಟಿ ರೂ. ಬುಧವಾರ 1.30 ಕೋಟಿ ರೂ. ಹಾಗೂ ಗುರುವಾರ 1.20 ಕೋಟಿ ರೂ. ಆದಾಯಗಳಿಸಿದೆ.
ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ 21.45 ಕೋಟಿ ರೂ. 2ನೇ ವಾರದಲ್ಲಿ 11.50 ಕೋಟಿ ರೂ. ಗಳಿಕೆಯೊಂದಿಗೆ ಒಟ್ಟು 39.95 ಕೋಟಿ ರೂ. ಗಳಿಸಿದೆ. ಅಲ್ಲದೇ 2ನೇ ವಾರದಲ್ಲಿ 780 ಪರದೆಗಳಲ್ಲಿ ಪ್ರದರ್ಶನವಾಗುತ್ತಿದ್ದ ಕೆಜಿಎಫ್ 3ನೇ ವಾರಕ್ಕೆ ಈ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು ಈ ಹಿಂದೆ 780 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಕೆಜಿಎಫ್ ಚಿತ್ರ ಇದೀಗ ಒಟ್ಟಾರೆ 951 ಪರದೆಗಳಲ್ಲಿ ಪ್ರದರ್ಶನವಾಗುತ್ತಿದೆ. 
ಹಿಂದಿ ಸಿನಿಮಾದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂಬೈಗೆ ಯಶ್ ತೆರಳಿದ್ದರು. ಐಟಿ ದಾಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನ ರದ್ದುಪಡಿಸಿ ಗುರುವಾರ ಬೆಂಗಳೂರಿಗೆ ಮರಳಿದ್ದರು.
https://twitter.com/taran_adarsh/status/1081140998829334529

No comments:

Post a Comment

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್...