ರಕ್ಷಿತ್ ಶೆಟ್ಟಿ ಜೀವನದಲ್ಲಿ ಎಲ್ಲಾ ನೀತಿ, ನಿಯಮ, ನಿರ್ಧಾರ ಮಾಡೋದು 'ಚಾರ್ಲಿ'!
ಬೆಂಗಳೂರು: ರಕ್ಷಿತ್ ಶೆಟ್ಟಿ ಜೀವನ, ಅಲ್ಲಿ ನಿರ್ಧಾರ ಕೈಗೊಳ್ಳುವವರು ಚಾರ್ಲಿ. ಇದನ್ನು ನೋಡಿ ಆಶ್ಚರ್ಯವಾಗುತ್ತಿಯೇ? ಹೌದು 777 ಚಾರ್ಲಿ ಸಿನಿಮಾ ಪೋಸ್ಟರ್ ನಲ್ಲಿ ಬರೆದಿರುವ ಈ ಸಾಲುಗಳು ಎಲ್ಲರ ಗಮನ ಸೆಳೆಯುತ್ತಿವೆ.
ಸಿನಿಮಾ ಕಥೆಗೆ ಈ ಸಾಲುಗಳು ಬಹಳ ಪ್ರಸ್ತುತ ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ, ಸಿನಿಮಾದಲ್ಲಿ ರಕ್ಷಿತ್ ಒಂಟಿ ಜೀವನ, ಅತನ ಕೋಪದ ಸ್ವಭಾವದ ಕಾರಣ ಯಾರ ಜೊತೆಗೆ ಆತ ಸೇರುವುದಿಲ್ಲ, ಹೀಗಾಗಿ ಸಮಾಜದಿಂದ ದೂರ ಇರುತ್ತಾನೆ. ಅವನ ಜೊತೆಗಿರುವ ನಾಯಿ ಆತನ ಸ್ವಭಾವಕ್ಕೆ ಪೂರ್ತಿ ವಿರುದ್ಧವಾದದ್ದು, ಹೈಪರ್ ಆ್ಯಕ್ಟಿವ್,
ರಕ್ಷಿತ್ ಜೀವನಕ್ಕೆ ಚಾರ್ಲಿ ಬಂದ ಮೇಲೆ, ಹೇಗೆ ಆತನ ಜೀವನ ಶೈಲಿ ಬದಲಾಗುತ್ತದೆ ಎಂಬ ಬಗ್ಗೆ ಸಿನಿಮಾ ಕಥೆಯಿದೆ. ಇದೊಂದು ಅದ್ಭುತ ಕಥೆಯಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
2019ರ ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ, ಮಾರ್ಚ್ ತಿಂಗಳಿನಲ್ಲಿ ಮತ್ತೆ ಶೂಟಿಂಗ್ ಆರಂಭವಾಗಲಿದೆ. ಸದ್ಯ ಅವನೇ ಶ್ರೀಮನ್ನಾರಾಯಣ ಶೂಟಿಂಗ್ ಶೇ. 30 ರಷ್ಟುಪ ಮುಗಿದಿದ್ದು, ಜೂನ್ ತಿಂಗಳ ಅಂತ್ಯದೊಳಗೆ ಸಿನಿಮಾ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.
No comments:
Post a Comment