"ಯಜಮಾನ'ನ ಶುಭಾಶಯಗಳು''
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಇದೀಗ ನಾಡಿನ ಸಮಸ್ತ ಜನತೆಗೆ ಟ್ವೀಟರ್ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಹೌದು, ಅಭಿಮಾನಿಗಳ ಡಿ ಬಾಸ್ ಟ್ವೀಟರ್ ನಲ್ಲಿ "ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. #Yajamana' ಎಂದು ಶುಭಾಶಯ ಕೋರಿದ್ದು, ಇದರ ಜೊತೆಗೆ "ಯಜಮಾನ'ನ ಹೊಸ ಲುಕ್ ಕೂಡ ತೋರಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಈ ವರ್ಷ "ಯಜಮಾನ' ಬರುತಿದ್ದಾನೆ, ಅದೂ ಡಿಫ್ರೆಂಟ್ ಲುಕ್‍ನಲ್ಲಿ ಎಂದು ಟ್ವೀಟ್‌ನ ರಿಟ್ವೀಟ್ ಮಾಡಿ ತರಹೇವಾರಿ ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ.
No comments:
Post a Comment