Monday, 7 January 2019

ಮಣಿಪಾಲ: ಸಿನಿಮಾ ಇಂಟರ್ವೆಲ್ ನಲ್ಲಿ ನವವಿವಾಹಿತೆ ನಾಪತ್ತೆ!



ಉಡುಪಿ: ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ದಂಪತಿ ಬಂದಿದ್ದು, ಇಂಟರ್ವೆಲ್ ವೇಳೆ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಪತ್ನಿ ನಾಪತ್ತೆಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಕಟಪಾಡಿ ನಿವಾಸಿ ಪತಿ ಲಾಯ್ಡ್ ಮೊಂತೆರೋ ಮಣಿಪಾಲ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಕಳೆದ ಶುಕ್ರವಾರ ಮಣಿಪಾಲದ ಚಿತ್ರಮಂದಿರವೊಂದಕ್ಕೆ ಪತ್ನಿ ಜೊತೆ ತೆರಳಿದ್ದರು. ಏತನ್ಮಧ್ಯೆ ಸಿನಿಮಾ ಇಂಟರ್ವೆಲ್ ವೇಳೆ ಪತ್ನಿ ಜೆನ್ ಡಿ.ಕ್ರೂಸ್ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದರು.
ಆದರೆ ಪತ್ನಿ ವಾಪಸ್ ಬಾರದೇ ಇರುವುದನ್ನು ಕಂಡ ಪತಿ ಲಾಯ್ಡ್ ಅವರು ಚಿತ್ರಮಂದಿರದಲ್ಲಿ ವಿಚಾರಿಸಿದ್ದರು. ಮನೆಗೂ ತೆರಳಿಲ್ಲ ಎಂಬುದು ಖಚಿತವಾದ ಮೇಲೆ ಮಣಿಪಾಲ ಠಾಣೆಯಲ್ಲಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ.
ಜೆನ್ ಮೂಲತಃ ಮೂಡುಬಿದಿರೆ ನಿವಾಸಿಯಾಗಿದ್ದು, ಮಂಗಳೂರಿನ ಹೋಟೆಲ್ ವೊಂದರಲ್ಲಿ ಉದ್ಯೋಗಿಯಾಗಿದ್ದರು. ಜೆನ್ ಮತ್ತು ಲಾಯ್ಡ್ 2018ರ ಡಿಸೆಂಬರ್ 31ರಂದು ವಿವಾಹವಾಗಿದ್ದರು. ಜೆನ್ ಅವರು ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆ. ಚಿತ್ರಮಂದಿರದ ಸಿಸಿಟಿವಿ ಪರಿಶೀಲನೆ ನಡೆಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


No comments:

Post a Comment

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್...