ಬೆಂಗಳೂರು: 'ಅಧಿರ' ಉಪೇಂದ್ರ ನಟನೆಯ ಬಹುನಿರೀಕ್ಷಿತ 50ನೇ ಸಿನಿಮಾ ಇದಾಗಲಿದ್ದು, ಸದ್ದಿಲ್ಲದೆ ಅದ್ರ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಹಾಗೆಯೇ ಸಿನಿಮಾಗೆ ಹೊಸ ಟ್ವಿಸ್ಟ್ ಸಿಕ್ಕಿದೆ, ಉಪೇಂದ್ರ ತಮ್ಮ 50ನೇ ಸಿನಿಮಾದ ಜವಾಬ್ದಾರಿಯನ್ನು ತಾವೇ ಹೊತ್ತಿದ್ದಾರೆ.
ಸದ್ಯ ಐ ಲವ್ ಯು ಸಿನಿಮಾದ ಶೂಟಿಂಗ್ನಲ್ಲಿ ಉಪೇಂದ್ರ ಬ್ಯುಸಿ ಇದ್ದಾರೆ,
ಸಿನಿಮಾಗೆ ಅಧಿರ ಅಂತ ಟೈಟಲ್ ಇಟ್ಟಿರೋ ಚಿತ್ರತಂಡ, ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಅಧಿರ ಅಂದ್ರೆ ಮಿಂಚು ಎಂದರ್ಥ. ಮಿಂಚಿನಂತಹ ತರುಣನೊಬ್ಬನ ಕಥೆ ಆಧಾರಿತ ಚಿತ್ರ ಇದಾಗಿದ್ದು, ಉಪ್ಪಿ ಇಲ್ಲಿ ಅಧಿರನಾಗಿ ಕಮಾಲ್ ಮಾಡಲಿದ್ದಾರೆ.
ನಿರ್ಮಾಪಕ ಕನಕಪುರ ಶ್ರೀನಿವಾಸ್ ಈ ಸಿನಿಮಾನ ನಿರ್ಮಾಣ ಮಾಡುತ್ತಿದ್ದು, ಕನ್ನಡ ಮತ್ತು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಅಧಿರ ತಯಾರಾಗಲಿದೆ. ಸುಮಾರು 50 ಕೋಟಿ ರೂ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ, ಏಪ್ರಿಲ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
ಸಿನಿಮಾದಲ್ಲಿ ಪ್ರಸಿದ್ಧ ನಾಯಕಿಯರು ನಟಿಸಲಿದ್ದಾರೆ ಎಂದು ನಿರ್ಮಾಪಕ ಶ್ರೀನಿವಾಸ್ ಹೇಳಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆಗೆ ಕಲಾವಿದರ ಪಟ್ಟಿ ಅಂತಿಮವಾಗಲಿದೆ ಎಂದು ತಿಳಿಸಿದ್ದಾರೆ,
ಸೆಕಠಾರಿ ವೀರ ಸುರ ಸುಂದರಾಂಗಿ ಸಿನಿಮಾ ಮೂಲಕ ಪೀರಿಯಾಡಿಕ್ ಪಾತ್ರಗಳಿಗೂ ಸೈ ಅನಿಸಿಕೊಂಡಿದ್ದ ಉಪೇಂದ್ರ, ಇದೀಗ 50ನೇ ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ. ಸ್ವತಃ ಉಪೇಂದ್ರ ಅವರೇ ನಿರ್ದೇಶನಕ್ಕಿಳಿದಿರುವುದು ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರಿಕ್ಷೆ ಮೂಡಿಸಿದೆ.
No comments:
Post a Comment