ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಬಿಡುಗಡೆಯಾದ ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ ಇದೀಗ 10ನೇ ದಿನಕ್ಕೆ 150 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿತ್ತು. ಇದೀಗ 13ನೇ ದಿನಕ್ಕೆ 175 ಕೋಟಿ ಕ್ಲಬ್ ಸೇರುವ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.
ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ 150 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರವೊಂದು ಈ ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ 175 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇನ್ನು ಚಿತ್ರ ಬಿಡುಗಡೆಯಾಗಿ 13 ದಿನ ಕಳೆದರೂ ಇನ್ನು ಚಿತ್ರವನ್ನು ನೋಡಲು ಥಿಯೇಟರ್ ಗಳತ್ತ ಪ್ರೇಕ್ಷಕರು ದಾಂಗುಡಿ ಹಿಡುತ್ತಿರುವುದರಿಂದ ಚಿತ್ರದ ಕಲೆಕ್ಷನ್ ಸಹ ಜೋರಾಗಿದೆ.
ಕೆಜಿಎಫ್ ಚಿತ್ರ ಜಗತ್ತಿನಾದ್ಯಂತ ಒಟ್ಟಾರೆ 175 ಕೋಟಿ ರುಪಾಯಿ ಗಳಿಸಿದ್ದು ಇದರಲ್ಲಿ 138.5 ಕೋಟಿ ನೆಟ್ ಶೇರ್ ಆಗಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ವಾರದ ಅಂತ್ಯಕ್ಕೆ 7.6 ಕೋಟಿ ರುಪಾಯಿ ಗಳಿಸಿದೆ.
ಇನ್ನು ಕನ್ನಡದಲ್ಲಿ ಒಟ್ಟಾರೆ 90 ಕೋಟಿಗೂ ಹೆಚ್ಚುಕಲೆಕ್ಷನ್ ಮಾಡಿದೆ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆ. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ಒಟ್ಟಾರೆ 75 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಇದೀಗ ಈ ದಾಖಲೆಯನ್ನು ಕೆಜಿಎಫ್ ಮುರಿದಿದೆ.
ಇಲ್ಲಿಯವರೆಗೂ ಹಿಂದಿ ಆವೃತ್ತಿಯಲ್ಲಿ ಕೆಜಿಎಫ್ ಚಿತ್ರ ಒಟ್ಟಾರೆ 30.45 ಕೋಟಿ ರುಪಾಯಿ ಗಳಿಸಿರುವ ಕೆಜಿಎಫ್ ಹೊಸ ದಾಖಲೆ ನಿರ್ಮಿಸಿದೆ.
ಇನ್ನು ಗುರುವಾರ ಬೆಳಗ್ಗೆ ಐಟಿ ಅಧಿಕಾರಿಗಳು ಸ್ಯಾಂಡಲ್ವುಡ್ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಇದರಲ್ಲಿ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ನಟ ಯಶ್ ಮನೆ ಮೇಲೂ ದಾಳಿ ನಡೆದಿದೆ.
No comments:
Post a Comment