ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ ಪಿಎಂ ನರೇಂದ್ರ ಮೋದಿ ಬಯೋಪಿಕ್ ಚಿತ್ರದಲ್ಲಿ ಪ್ರತಿಭಾವಂತ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು ಮೋದಿ ಪಾತ್ರದಲ್ಲಿ ನಟಿಸಲಿದ್ದಾರೆ.
ಈಚೆಗೆ ಸ್ವಲ್ಪ ಕಾಲ ಚಿತ್ರರಂಗದಿಂದ ದೂರವಿರುವ ಒಬೆರಾಯ್ ಅವರು ಮೋದಿ ಬಯೋಪಿಕ್ ಚಿತ್ರದಲ್ಲಿ ಮೋದಿ ಪಾತ್ರವನ್ನು ವಹಿಸುವರೆಂಬ ಸುದ್ದಿಯನ್ನು ಖ್ಯಾತ ಚಿತ್ರ ವಿಮರ್ಶಕ ಮತ್ತು ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಮೇರಿ ಕೋಮ್ ಬಯೋಪಿಕ್ ನಿರ್ದೇಶಿಸಿದ್ದ ಉಮಂಗ್ ಕುಮಾರ್ ಮೋದಿ ಬಯೋಪಿಕ್ ಚಿತ್ರವನ್ನು ನಿರ್ದೇಶಿಸಲಿದ್ದು, ಸಂದೀಪ್ ಸಿಂಗ್ ನಿರ್ಮಿಸಲಿದ್ದಾರೆ.
ಚಿತ್ರದ ಮೊದಲ ಪೋಸ್ಟರ್ ಇದೇ ಜನವರಿ 7ರಂದು ಬಿಡುಗಡೆಯಾಗಲಿದೆ. ಚಿತ್ರೀಕರಣ ಇದೇ ಜನವರಿ ತಿಂಗಳ ಮಧ್ಯ ಭಾಗದಿಂದ ಆರಂಭವಾಗಲಿದೆ ಎಂದು ತರಣ್ ಆದರ್ಶ್ ತಿಳಿಸಿದ್ದಾರೆ.
- immu
No comments:
Post a Comment