Monday, 7 January 2019

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ರಿಲೀಸ್




ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದು, ಫಸ್ಟ್ ಫೋಸ್ಟರ್ ನಲ್ಲಿ ಒಬೇರಾಯ್ ಪ್ರಧಾನಿಯಂತೆ ಕಾಣಿಸುತ್ತಿರುವುದು ವಿಶೇಷತೆಯಾಗಿದೆ.
ತುಂಬಾ ವರ್ಷಗಳಿಂದ ತೆರೆಮರೆಯಲ್ಲಿದ್ದ ವಿವೇಕ ಒಬೆರಾಯ್ ದೊಡ್ಡದೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಜೀವನಾಧಾರಿತ ಸಿನಿಮಾ ವಿವೇಕ್ ಸಿನಿ ಜೀವನಕ್ಕೆ ನೆರವಾಗಲಿದೆ ಎಂಬುದು ಆಪ್ತರ ಅನಿಸಿಕೆಯಾಗಿದೆ.



ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವೀಟರ್ ನಲ್ಲಿ ಸಿನಿಮಾದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದು, ವಿವೇಕ್ ಆನಂದ್ ಒಬೆರಾಯ್(ವಿವೇಕ್ ಒಬೆರಾಯ್) ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಹೀರೋ..ಪ್ರಧಾನಿ ನರೇಂದ್ರ ಮೋದಿ ಸಿನಿಮಾದ ಮೊದಲ ಪೋಸ್ಟರ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 23 ಭಾಷೆಯಲ್ಲಿ ಬಿಡುಗಡೆಗೊಳಿಸಿದ್ದಾರೆ.
ಈ ಸಿನಿಮಾವನ್ನು ಓಮುಂಗ್ ಕುಮಾರ್ ನಿರ್ದೇಶಿಸಿದ್ದು, ಸುರೇಶ್ ಒಬೆರಾಯ್ ಮತ್ತು ಸಂದೀಪ್ ಸಿಂಗ್ ಸಿನಿಮಾದ ನಿರ್ಮಾಪಕರಾಗಿದ್ದಾರೆ ಎಂದು ವರದಿ ತಿಳಿಸಿದೆ.

https://twitter.com/taran_adarsh/status/1082229787186335744https://twitter.com/taran_adarsh/status/1082229787186335744

ಮಣಿಪಾಲ: ಸಿನಿಮಾ ಇಂಟರ್ವೆಲ್ ನಲ್ಲಿ ನವವಿವಾಹಿತೆ ನಾಪತ್ತೆ!



ಉಡುಪಿ: ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ದಂಪತಿ ಬಂದಿದ್ದು, ಇಂಟರ್ವೆಲ್ ವೇಳೆ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಪತ್ನಿ ನಾಪತ್ತೆಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಕಟಪಾಡಿ ನಿವಾಸಿ ಪತಿ ಲಾಯ್ಡ್ ಮೊಂತೆರೋ ಮಣಿಪಾಲ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಕಳೆದ ಶುಕ್ರವಾರ ಮಣಿಪಾಲದ ಚಿತ್ರಮಂದಿರವೊಂದಕ್ಕೆ ಪತ್ನಿ ಜೊತೆ ತೆರಳಿದ್ದರು. ಏತನ್ಮಧ್ಯೆ ಸಿನಿಮಾ ಇಂಟರ್ವೆಲ್ ವೇಳೆ ಪತ್ನಿ ಜೆನ್ ಡಿ.ಕ್ರೂಸ್ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದರು.
ಆದರೆ ಪತ್ನಿ ವಾಪಸ್ ಬಾರದೇ ಇರುವುದನ್ನು ಕಂಡ ಪತಿ ಲಾಯ್ಡ್ ಅವರು ಚಿತ್ರಮಂದಿರದಲ್ಲಿ ವಿಚಾರಿಸಿದ್ದರು. ಮನೆಗೂ ತೆರಳಿಲ್ಲ ಎಂಬುದು ಖಚಿತವಾದ ಮೇಲೆ ಮಣಿಪಾಲ ಠಾಣೆಯಲ್ಲಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ.
ಜೆನ್ ಮೂಲತಃ ಮೂಡುಬಿದಿರೆ ನಿವಾಸಿಯಾಗಿದ್ದು, ಮಂಗಳೂರಿನ ಹೋಟೆಲ್ ವೊಂದರಲ್ಲಿ ಉದ್ಯೋಗಿಯಾಗಿದ್ದರು. ಜೆನ್ ಮತ್ತು ಲಾಯ್ಡ್ 2018ರ ಡಿಸೆಂಬರ್ 31ರಂದು ವಿವಾಹವಾಗಿದ್ದರು. ಜೆನ್ ಅವರು ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆ. ಚಿತ್ರಮಂದಿರದ ಸಿಸಿಟಿವಿ ಪರಿಶೀಲನೆ ನಡೆಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


Sunday, 6 January 2019

ಗಂಡು ಮೆಟ್ಟಿದ ನಾಡಲ್ಲಿ ನಟ ಸಾರ್ವಭೌಮ ಆಡಿಯೋ ಬಿಡುಗಡೆ: ಯುವರಾಜ್ ,ರಾಘಣ್ಣ, ರಚಿತಾ, ಮಸ್ತ್ ಡ್ಯಾನ್ಸ್.....

                                      Image result for natasarvabhouma audio release  
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅಭಿನಯದ ಬಹುನಿರೀಕ್ಷೆಯ ನಟ ಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಿನ್ನೆ ಅದ್ದೂರಿಯಾಗಿ ನಡೆಯಿತು.

ಈ ಮೊದಲು ಐಟಿ ಶಾಕ್  ಹಿನ್ನೆಲೆಯಲ್ಲಿ ಆಡಿಯೋ ಬಿಡುಗಡೆ ಬಗ್ಗೆ ಅನುಮಾನವಿತ್ತು. ಆದರೆ, ನಿನ್ನೆ ಮಧ್ಯಾಹ್ಯದ ವೇಳೆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಪುನೀತ್ ರಾಜ್  ಕುಮಾರ್,  ಫೇಸ್ ಬುಕ್ ಲೈವ್ ನಲ್ಲಿ  ಹುಬ್ಬಳ್ಳಿಗೆ ಬರುತ್ತಿರುವುದಾಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು.

ನೆಹರೂ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ನಟಸಾರ್ವಭೌಮ ಚಿತ್ರದ ಹಾಡುಗಳ  ಬಿಡುಗಡೆಯಾಯಿತು.
  ಈ ಚಿತ್ರದ ನಾಯಕಿ ರಚಿತಾರಾಮ್,  ಪುನೀತ್ ರಾಜ್ ಕುಮಾರ್ ಸಹೋದರ  ರಾಘವೇಂದ್ರ ರಾಜ್ ಕುಮಾರ್,  ಗುರು ವಿನಯ್ ಕುಮಾರ್ ಸೇರಿದಂತೆ  ಡಾ. ರಾಜ್ ಕುಮಾರ್ ಕುಟುಂಬದ  ಸದಸ್ಯರು ನಟಸಾರ್ವಭೌಮನ ಆಡಿಯೋ ಬಿಡುಗಡೆಗೆ ರಂಗು ತುಂಬಿದರು.

ಪುನೀತ್ ರಾಜ್ ಕುಮಾರ್  ಕ್ರೇನ್ ಮೂಲಕ ವೇದಿಕೆಗೆ ಎಂಟ್ರಿ ನೀಡುತ್ತಿದ್ದಂತೆ ಅಭಿಮಾನಿಗಳ ಜಯಘೋಷ ಮುಗಿಲುಮುಟ್ಟಿತು. ರಾಘವೇಂದ್ರ  ರಾಜ್ ಕುಮಾರ್ , ಅವರ ಕಿರಿಯ ಪುತ್ರ ಯುವರಾಜ್  ಹಾಗೂ ರಚಿತಾ ರಾಮ್ ನೃತ್ಯ ಅಭಿಮಾನಿಗಳ ಮನ ರಂಜಿಸಿತು.
ನಟ ಸಾರ್ವಭೌಮ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್  ಕಾರ್ಯಕ್ರಮಕ್ಕೆ ಗೈರಾಗಿದ್ದರು.  ಫೆಬ್ರವರಿ ಮೊದಲ ವಾರದಲ್ಲಿ ನಟ ಸಾರ್ವಭೌಮ ಚಿತ್ರ ತೆರೆಗೆ ಅಪ್ಪಳಿಸಲಿದೆ.

ಆಪ್ ಡೌನ್ ಲೋಡ್ ಅಂಕಿ-ಅಂಶ: ಈ ವಿಷಯದಲ್ಲಿ ಭಾರತೀಯರೇ ಮುಂದು!


ಸ್ಮಾರ್ಟ್ ಫೋನ್ ಅತ್ಯಂತ ಸುಗಮವಾಗಿ ಕಾರ್ಯನಿರ್ವಹಿಸಬೇಕಾದರೆ 50 ಕ್ಕಿಂತ ಹೆಚ್ಚು ಆಪ್ ಗಳನ್ನು ಹೊಂದಿರುವುದು ಸೂಕ್ತವಲ್ಲ. ಕೆಲವೊಮ್ಮೆ 200 ಕ್ಕೂ ಹೆಚ್ಚು ಆಪ್ ಗಳಿರುತ್ತವೆ, ಆಪ್ ಗಳು ಹೆಚ್ಚಾದಷ್ಟೂ ಸ್ಮಾರ್ಟ್ ಫೋನ್ ಕಾರ್ಯಕ್ಷಮತೆ, ಭದ್ರತೆಗೂ ಕುತ್ತು ಹೆಚ್ಚು ಎಂದು ಟೆಕ್ ಎಆರ್ ಸಿ ವರದಿ ಹೇಳಿದೆ. 
ಟೆಕ್ಎಆರ್ ಸಿ ಡಿಜಿಟ್ ಇನ್ ಸೈಟ್ಸ್ ನ ಪ್ರಕಾರ, ಸ್ಮಾರ್ಟ್ ಫೋನ್ ನಲ್ಲಿ ಇನ್ಸ್ಟಾಲ್ ಆಗಿರುವ ಆಪ್ ಗಳ ಸರಾಸರಿ ಸಂಖ್ಯೆ 51. ಆದರೆ ಇದು 207 ನ್ನೂ ದಾಟಿರುವ ನಿದರ್ಶನಗಳಿದ್ದು, ಯೋಚನೆ ಮಾಡದೇ ಮನಸೋ ಇಚ್ಛೆ ಆಪ್ ಗಳನ್ನು ಡೌನ್ ಲೋಡ್ ಮಾಡಲಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ವರದಿ ಹೇಳುತ್ತಿದೆ. 
ಈ ರೀತಿ ಮನಸೋ ಇಚ್ಛೆ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೆ, ಸ್ಮಾರ್ಟ್ ಫೋನ್ ಕಾರ್ಯಕ್ಷಮತೆಗೂ ಸಮಸ್ಯೆಯಾಗುವುದಷ್ಟೇ ಅಲ್ಲದೇ ಭದ್ರತೆಗೂ ಕುತ್ತು ಬರಲಿದೆ ಎಂದು ವರದಿ ಎಚ್ಚರಿಸಿದೆ. ಭಾರತೀಯರ ಸ್ಮಾರ್ಟ್ ಫೋನ್ ಗಳಲ್ಲಿ 24 ಆಪ್ ಗಳಿದ್ದು ಅಗತ್ಯವಿದ್ದಷ್ಟೇ ಆಪ್ ಗಳನ್ನು ಡೌನ್ ಲೋಡ್ ಮಾಡಿ ಬಳಕೆ ಮಾಡುತ್ತಿದ್ದು, ಭಾರತೀಯರೇ ಉತ್ತಮ ಎನ್ನುತ್ತಿದೆ ವರದಿ. 
ಭಾರತದ ಸ್ಮಾರ್ಟ್ ಫೋನ್ ಬಳಕೆದಾರರ ಪೈಕಿ ಶೇ.38 ರಷ್ಟು ಮಂದಿ 6-10 ಆಪ್ ಗಳನ್ನು ದಿನ ನಿತ್ಯ ಬಳಕೆ ಮಾಡುತ್ತಾರೆ. ಈ ಪೈಕಿ ಅತಿ ಹೆಚ್ಚು ಬಳಕೆ ಮಾಡುವುದು ಸೋಶಿಯಲ್ ಮೀಡಿಯಾ ಆಪ್ ಗಳನ್ನೇ ಎಂದು ವರದಿ ಹೇಳಿದೆ.  ಶೇ.47 ರಷ್ಟು ಮಂದಿ ಆರ್ಥಿಕ ವಿಚಾರಕ್ಕೆ ಸಂಬಂಧಪಟ್ಟ ಆಪ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಜಾಗತಿಕವಾಗಿ ಗೇಮಿಂಗ್ ಹಾಗೂ ಮನರಂಜನಾ ಆಪ್ ಗಳು ಹೆಚ್ಚು ಡೌನ್ ಲೋಡ್ ಆಗುತ್ತಿದೆ ಎಂದು ವರದಿ ಮೂಲಕ ತಿಳಿದುಬಂದಿದೆ. 

ಸ್ಯಾಂಡಲ್‍ವುಡ್ ಐಟಿ ದಾಳಿ: 11 ಕೋಟಿ ರು. ಆಸ್ತಿ ಜಪ್ತಿ, 109 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆ.


ಬೆಂಗಳೂರು: ಸ್ಯಾಂಡಲ್‌ಪುಡ್‌ ನಾಲ್ವರು ಖ್ಯಾತ ನಟರ ಹಾಗೂ ನಿರ್ಮಾಪಕರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ  2.85 ಕೋಟಿ ರುಪಾಯಿ ನಗದು ಸೇರಿದಂತೆ ಒಟ್ಟು 11 ಕೋಟಿ ರುಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಅಲ್ಲದೆ 109 ಕೋಟಿ ರುಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ. 
ದಾಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇಂದು ಅಧಿಕೃತ ಪ್ರಕಟಣೆ ನೀಡಿದ್ದು,  ಒಟ್ಟು 21 ಕಡೆ ಏಕ ಕಾಲಕ್ಕೆ ನಡೆಸಿದ ದಾಳಿಯಲ್ಲಿ 2.85 ಕೋಟಿ ನಗದು,  25.3 ಕೆ.ಜಿ ಚಿನ್ನಾಭರಣ ಸೇರಿ 11 ಕೋಟಿ ರುಪಾಯಿ ಮೌಲ್ಯದ ಜಪ್ತಿ ಮಾಡಲಾಗಿದೆ ಮತ್ತು 109 ಕೋಟಿ ರುಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದು ನಟರು, ನಿರ್ಮಾಪಕರು ಒಪ್ಪಿರುವ ಅಘೋಷಿತ ಆಸ್ತಿಯಾಗಿದೆ. ಆದಾಯದ ಜತೆಗೆ ಇನ್ನಷ್ಟು ಪ್ರಮುಖ ದಾಖಲೆಗಳು ಪತ್ತೆಯಾಗಿವೆ. ಅವುಗಳು ಅಘೋಷಿತ ಆಸ್ತಿ ಎಂದು ಒಪ್ಪಿಕೊಂಡಿಲ್ಲ. ಅದೂ ಸೇರಿದರೆ ಅಘೋಷಿತ ಆಸ್ತಿ ಮೌಲ್ಯ ಇನ್ನು ಬಹಳ ದೊಡ್ಡದಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 
ಜಾರಿ ನಿರ್ದೇಶನಾಲಯಕ್ಕೂ ಐಟಿ ಇಲಾಖೆ ಮಾಹಿತಿ ರವಾನೆ ಮಾಡಿದ್ದು ಪ್ರಕರಣ ವರ್ಗಾವಣೆ ಆದರೆ ಸ್ಯಾಂಡಲ್‌ವುಡ್‌ ದಿಗ್ಗಜರಿಗೆ ಸಂಕಷ್ಟ ಎದುರಾಗಬಹುದು. 
ಮೂರು ತಿಂಗಳ ಕಾಲ ಗೌಪ್ಯ ತನಿಖೆ ನಡೆಸಿ ಈ ದಾಳಿ ನಡೆಸಲಾಗಿದ್ದು, ತೆರಿಗೆ ವಂಚನೆ ಅವ್ಯವಹಾರದ ಕುರಿತು ಶೀಘ್ರದಲ್ಲೇ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರಮಂದಿರದಲ್ಲಿ ದಾಖಲೆ ರಹಿತವಾಗಿ ಸಂಗ್ರಹಿಸಿದ ನಗದು,ಆಡಿಯೋ ಹಕ್ಕು, ಡಿಜಿಟಲ್‌ ಹಕ್ಕುಗಳ ಮೂಲದ ಅವ್ಯವಹಾರ ನಡೆಸಿದ ಹಣ  ಇದಾಗಿದೆ ಎಂದು ಐಟಿ ಇಲಾಖೆ ಹೇಳಿದೆ. ಆದರೆ ದಾಳಿಯಲ್ಲಿ ವೈಯಕ್ತಿಕವಾಗಿ ಯಾರ ಬಳಿ ಎಷ್ಟು ಸಂಪತ್ತು ಪತ್ತೆಯಾಗಿದೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸದೆ ಜಾಣತನ ತೋರಿದ್ದಾರೆ. 
ಪ್ರಖ್ಯಾತ ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಮತ್ತು ಯಶ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌,ಸಿ.ಆರ್‌.ಮನೋಹರ್‌, ವಿಜಯ್‌ ಕಿರಗಂದೂರು ಮತ್ತು  ಜಯಣ್ಣ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿ 2 ದಿನಗಳ ಕಾಲ ನಿರಂತರ ದಾಖಲೆಗಳ ಪರಿಶೀಲನೆ ನಡೆಸಿದ್ದರು. 

ಸ್ಯಾಂಡಲ್‍ವುಡ್ ಐಟಿ ದಾಳಿ ಪ್ರಕರಣ – ಸಿಕ್ಕಿದ್ದು ಕೋಟಿ ಕೋಟಿ ಆಸ್ತಿ !

ಬೆಂಗಳೂರು: ಚಂದನವನದ ನಟ, ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿದಂತೆ ಐಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಬರೋಬ್ಬರಿ 109 ಕೋಟಿ ರೂ. ಮೌಲ್ಯದ ಅಘೋಷಿತ ಆದಾಯದ ದಾಖಲೆ ಹಾಗೂ 25.3 ಕೆಜಿ ಚಿನ್ನಾಭರಣ, 2.85 ಕೋಟಿ ರೂ. ನಗದು ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ಸಿನಿಮಾ ಕ್ಷೇತ್ರ ವಿವಿಧ ನಟ, ನಿರ್ಮಾಪಕರ ಮೇಲೆ ನಡೆದ ಈ ದಾಳಿಯಲ್ಲಿ ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ 180 ಅಧಿಕಾರಿಗಳು ಭಾಗವಹಿಸಿದ್ದು, 21 ಕಡೆ ದಾಳಿ ಮಾಡಿ ಇದರಲ್ಲಿ 5 ಸ್ಥಳಗಳಲ್ಲಿ ಹುಡುಕಾಟವನ್ನು ನಡೆಸಲಾಗಿದೆ.ದಾಳಿ ನಡೆಸಲು ಇಲಾಖೆ ಕಳೆದ 3 ತಿಂಗಳಿನಿಂದ ಕೂಡ ಮಾಹಿತಿ ಸಂಗ್ರಹಿಸಿದ್ದು, ಈ ವೇಳೆ ಗುರುತಿಸಲಾದ ವ್ಯಕ್ತಿಗಳು ಹಾಗೂ ಸ್ಥಳಗಳ ಮೇಲೆ ದಾಳಿ ನಡೆದಿದೆ. ಇದರಲ್ಲಿ ಸಿನಿಮಾ ನಿಮಾರ್ಪಕರು, ನಟರು, ಸಿನಿಮಾ ಸಂಸ್ಥೆಗಳು ಕೂಡ ಸೇರಿದೆ. ದಾಳಿಯ ವೇಳೆ ಆಘೋಷಿತ ಆಸ್ತಿ, ಹಣ ಸೇರಿದಂತೆ ವಿವಿಧ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಲಭ್ಯವಾಗಿದೆ. ಪ್ರಮುಖವಾಗಿ ಸಿನಿಮಾ ರಂಗದಲ್ಲಿ ಚಿತ್ರಮಂದಿರದಿಂದ ಬರುವ ಆದಾಯವನ್ನು ಬೇರೆಡೆ ವರ್ಗಾವಣೆ ಮಾಡಿ ಹೂಡಿಕೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಬಹು ದೊಡ್ಡ ಆರ್ಥಿಕ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಸಿನಿಮಾ ಹಕ್ಕುಗಳ ಮಾರಾಟ, ಡಿಜಿಟಲ್ ರೈಟ್ಸ್, ಚಿತ್ರ ಮಂದಿರದ ಆದಾಯ, ಟಿವಿ ಹಕ್ಕುಗಳು, ಆಡಿಯೋ ಮತ್ತು ಸ್ಯಾಟಲೈಟ್ ಹಕ್ಕುಗಳು ಸೇರಿದಂತೆ ಇತರೇ ಮೂಲಗಳಿಂದ ಗಳಿಸಿದ ಆದಾಯದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.
ಸಿನಿಮಾದಿಂದ ಪಡೆದ ಆದಾಯದೊಂದಿಗೆ ಬೇರೆ ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸ್ಪಷ್ಟವಾಗಿದ್ದು, ಈ ಮೂಲಗಳಿಂದ ಬಂದ ಆದಾಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಒಟ್ಟು ಮೊತ್ತದಲ್ಲಿ ಹೆಚ್ಚಾಗುವ ಸಾಧ್ಯತೆಯ ಬಗ್ಗೆಯೂ ಐಟಿ ಇಲಾಖೆ ತಿಳಿಸಿದೆ. ಐಟಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯನ್ನು ಇಡಿ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಪ್ರವೇಶ ಪಡೆದರೆ ಎಲ್ಲರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ತೆರಿಗೆ ವಂಚನೆ ಮಾಡಲು ಹಣ ವರ್ಗಾವಣೆ ಮಾಡಿರುವುದು ಸಾಬೀತಾದರೆ ಇಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಐಟಿ ಕಾಯ್ದೆ 278 (ಡಿ) ಅಡಿ ಪ್ರಕರಣ ದಾಖಲಿಸಲು ಐಟಿ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.
ಕಳೆದ 3 ದಿನಗಳಿಂದ ನಡೆದ ದಾಳಿಯ ವೇಳೆ ಪತ್ತೆಯಾದ ಆಸ್ತಿ, ಹಣ, ಆದಾಯದ ಒಟ್ಟು ಮಾಹಿತಿಯನ್ನು ಮಾತ್ರ ಐಟಿ ಅಧಿಕಾರಿಗಳು ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ಯಾವುದೇ ನಟ, ನಿರ್ಮಾಪಕರ ಮನೆಯಲ್ಲಿ ಎಷ್ಟು ಹಣ ಲಭಿಸಿದೆ ಎಂಬ ಬಗ್ಗೆ ಮಾಹಿತಿ ನೀಡಿಬೇಕಿದೆ. ಸದ್ಯ ಐಟಿ ಇಲಾಖೆ ವಶಕ್ಕೆ ಪಡೆದಿರುವ ಆದಾಯ ಹಾಗೂ ಹಣದ ಬಗ್ಗೆ ನಾಳೆಯಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಟ ಹಾಗೂ ನಿರ್ಮಾಪಕರು ಐಟಿ ಇಲಾಖೆಗೆ ಆಗಮಿಸಿ ಸೂಕ್ತ ದಾಖಲೆ ಹಾಗೂ ಸ್ಪಷ್ಟನೆ ನೀಡಲು ಅವಕಾಶ ಇದೆ. ಜನವರಿ 3 ರಂದು ನಡೆದ ಐಟಿ ದಾಳಿಯಲ್ಲಿ ನಾಲ್ವರು ನಿರ್ಮಾಪಕರು ಹಾಗೂ ನಾಲ್ವರು ಸ್ಟಾರ್ ನಟರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ನಿಲ್ಲದ ಕೆಜಿಎಫ್ ಹವಾ: ಹಿಂದಿ ಸ್ಕ್ರೀನ್ ಗಳ ಸಂಖ್ಯೆ 780ರಿಂದ 951ಕ್ಕೆ ಏರಿಕೆ...!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ತನ್ನ ನಾಗಾಲೋಟ ಮುಂದುವರೆಸಿದ್ದು, ಹಿಂದಿ ಭಾಷೆಯ ಸ್ಕ್ರೀನ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯೊಂದಿಗೆ ದಾಖಲೆ ಬರೆದಿದ್ದ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ, ಗಲ್ಲ ಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದೆ. ಈ ವರೆಗೂ ಕೆಜಿಎಫ್ ಚಿತ್ರ ಹಿಂದಿ ಭಾಷೆಯಲ್ಲಿ ಮಾತ್ರವೇ ಸುಮಾರು 32 ಕೋಟಿ ಗೂ ಅಧಿಕ ರೂ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ಬಿಡುಗಡೆಯಾಗಿ ಮೂರು ವರಗಳೇ ಕಳೆದರೂ ಕೆಜಿಎಫ್ ಚಿತ್ರದ ಸ್ಕೀನ್ ಗಳ ಸಂಖ್ಯೆ ಕಡಿಮೆಯಾಗಿಲ್ಲ. ಬದಲಿಗೆ ಬಿಡುಗಡೆಯಾಗುತ್ತಿರುವ ಹೊಸ ಚಿತ್ರಗಳಿಗೂ ಸವಾಲೆಸೆಯುವಂತೆ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ.  ಡಿ. 28ರ ಶುಕ್ರವಾರ 1.25 ಕೋಟಿ ರೂ., ಶನಿವಾರ 1.75 ಕೋಟಿ ರೂ., ಭಾನುವಾರ 2.25 ಕೋಟಿ ರೂ., ಸೋಮವಾರ 1.50 ಕೋಟಿ ರೂ., ಮಂಗಳವಾರ 2.25 ಕೋಟಿ ರೂ. ಬುಧವಾರ 1.30 ಕೋಟಿ ರೂ. ಹಾಗೂ ಗುರುವಾರ 1.20 ಕೋಟಿ ರೂ. ಆದಾಯಗಳಿಸಿದೆ.
ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ 21.45 ಕೋಟಿ ರೂ. 2ನೇ ವಾರದಲ್ಲಿ 11.50 ಕೋಟಿ ರೂ. ಗಳಿಕೆಯೊಂದಿಗೆ ಒಟ್ಟು 39.95 ಕೋಟಿ ರೂ. ಗಳಿಸಿದೆ. ಅಲ್ಲದೇ 2ನೇ ವಾರದಲ್ಲಿ 780 ಪರದೆಗಳಲ್ಲಿ ಪ್ರದರ್ಶನವಾಗುತ್ತಿದ್ದ ಕೆಜಿಎಫ್ 3ನೇ ವಾರಕ್ಕೆ ಈ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು ಈ ಹಿಂದೆ 780 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಕೆಜಿಎಫ್ ಚಿತ್ರ ಇದೀಗ ಒಟ್ಟಾರೆ 951 ಪರದೆಗಳಲ್ಲಿ ಪ್ರದರ್ಶನವಾಗುತ್ತಿದೆ. 
ಹಿಂದಿ ಸಿನಿಮಾದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂಬೈಗೆ ಯಶ್ ತೆರಳಿದ್ದರು. ಐಟಿ ದಾಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನ ರದ್ದುಪಡಿಸಿ ಗುರುವಾರ ಬೆಂಗಳೂರಿಗೆ ಮರಳಿದ್ದರು.
https://twitter.com/taran_adarsh/status/1081140998829334529

Saturday, 5 January 2019

ನಾನು ಉತ್ತಮವಾದದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ: ಅದಿತಿ ಪ್ರಭುದೇವ
ಬೆಂಗಳೂರು: ಅದಿತಿ ಪ್ರಭುದೇವ ಕನ್ನಡ ಸಿನಿಮಾ ರಸಿಕರಿಗೆ ಅಪರಿಚಿತರಲ್ಲ, ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅದಿತಿ ಹಿರಿತೆರೆಗೆ ಧೈರ್ಯಂ ಸಿನಿಮಾ ಮೂಲಕ 

ಪಾದಾರ್ಪಣೆ ಮಾಡಿದ್ದಾರೆ. 

ಅದಿತಿ ಬಜಾರ್ ಸಿನಿಮಾದಲ್ಲೂ ನಟಿಸಿದ್ದಾರೆ ಚಮಕ್‌' ನಂತರ "ಬಜಾರ್‌' ಎಂಬ ಹೊಸ ಚಿತ್ರವನ್ನು ಸುನಿ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಅಲ್ಲದೇ ಚಿತ್ರದ ಪೋಸ್ಟರ್, ಹಾಡುಗಳು ಹಾಗೂ ಟ್ರೈಲರ್ ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಚಿತ್ರತಂಡ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಿದೆ. ಅಲ್ಲದೆ ಟ್ರೈಲರ್ ನೋಡಿದ ಸಿನಿರಸಿಕರಿಂದ ಬೊಂಬಾಟ್ ಪ್ರತಿಕ್ರಿಯೆ ವ್ಯಕ್ತವಾಗಿದೆ.
"ಪಾರಿವಾಳ ಪ್ರೀತಿಯ ಸಂಕೇತ, ಪಾರಿವಾಳ ಶಾಂತಿಯ ಪ್ರತೀಕ. ಆದರೆ ನಿಮಗೆ ಗೊತ್ತಿಲ್ಲದ ಬೇರೆ ಪಾರಿವಾಳದ ಲೋಕವೊಂದಿದೆ' ಎನ್ನುವ ಡೈಲಾಗ್​ ಮೂಲಕ ಟ್ರೈಲರ್ ಆರಂಭವಾಗುತ್ತದೆ. ನೋಡಲು ಪಕ್ಕಾ ಕಮರ್ಷಿಯಲ್ ಸಿನಿಮಾದಂತೆ ಕಾಣಿಸುತ್ತಿರುವ "ಬಜಾರ್' ಸಿನಿಮಾ ಅಂಡರ್ ವರ್ಲ್ಡ್ ಕಥಾಹಂದರವನ್ನೊಳಗೊಂಡಿದ್ದು, ಈ ಚಿತ್ರದಲ್ಲಿ ಪ್ರೇಮ ಸಂದೇಶ ಸಾರುವ ಪಾರಿವಾಳಕ್ಕೂ ಪ್ರಮುಖ ಪಾತ್ರವಿದೆ.
ಎಂಬಿಎ  ಮತ್ತು ಎಂಜಿನೀಯರ್ ಪದವಿಧರೆಯಾಗಿರುವ ಅದಿತಿ ಸಿನಿಮಾ ರಂಗಕ್ಕೆ ಯಾವುದೇ ತಯಾರಿಲ್ಲದೇ ಪ್ರವೇಶಿಸಿದರು. ಬ್ಯಾಂಕ್ ಮ್ಯಾನೇರ್ ಆಗಲು  ಬಯಸಿದ್ದರು.
ನಾನು ಹಲವಾರು ಆಡಿಶನ್ ಗಳಲ್ಲಿ ಭಾಗಹಿಸಿದ್ದೇನೆ,  ಬಜಾರ್ ನಂತರ  ಹಲವು ಕಥೆಗಳು ಬಂದವು, ಆಪರೇಷನ್ ನಕ್ಷತ್ರ,  ತೋತೋಪುರಿ ಸೇರಿದಂತೆ ಹಲವು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ನಾನು ಮೊದಲಿಗೆ ಕಥೆ  ಓದುತ್ತೇನೆ, ಕಥೆ ನನ್ನ ಪಾತ್ರಕ್ಕೆ ಒಪ್ಪುತ್ತದೆ ಎಂದಾದರೇ ಮಾತ್ರ ನಾನು ಸಹಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬಜಾರ್  ಸಿನಿಮಾದಲ್ಲಿ  ಪಾರಿವಾಳಗಳ ಬೆಟ್ಟಿಂಗ್‍ನಲ್ಲಿ ನಡೆಯುವ ಪ್ರೇಮಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. "ಬಜಾರ್‌' ಚಿತ್ರದ ಮೂಲಕ ಧನ್‌ವೀರ್‌ ಎಂಬ ಹೊಸ ನಟನನ್ನು ಸುನಿ ಕನ್ನಡಕ್ಕೆ ಪರಿಚಯಿಸುತ್ತಿದ್ದು, ಧನ್‌ವೀರ್‌ ಎದುರು ನಾಯಕಿಯಾಗಿ "ಧೈರ್ಯಂ'ನ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. "ಬಜಾರ್‌' ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು, ಎಂ.ಎಲ್‌. ಪ್ರಸನ್ನ ಅವರ ಕಥೆಗೆ ಸುನಿ ಚಿತ್ರಕಥೆ ರಚಿಸಿದ್ದಾರೆ.

ಐಟಿ ಅಧಿಕಾರಿಗಳ ಶೋಧ ಅಂತ್ಯ: ಆಕ್ರೋಶಗೊಂಡ ರಾಕಿ ಭಾಯ್ ಹೇಳಿದ್ದೇನು?

ಬೆಂಗಳೂರು: ಅಂತೂ ಮೂರು ದಿನಗಳ ಶೋಧದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ರಾಕಿಂಗ್ ಸ್ಟಾರ್ ಯಶ್ ಮನೆಯಿಂದ ಹೊರಹೋಗಿದ್ದು ಈ ಸಂಬಂಧ ಯಶ್ ಮಾತನಾಡಿದ್ದಾರೆ. 
ಐಟಿ ಅಧಿಕಾರಿಗಳ ಶೋಧ ಅಂತ್ಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಶ್, ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ವಿಚಾರಕ್ಕೆ ನಮ್ಮ ಮನೆ ಮೇಲೆ ದಾಳಿ ನಡೆದಿದೆ ಅಂತೆಲ್ಲಾ ಊಹಾಪೋಹಾ ಹಬ್ಬಿಸಬಾರದು ಎಂದು ಹೇಳಿದ್ದಾರೆ. 
ಐಟಿ ದಾಳಿ ಸಂಬಂಧ ಕೇವಲ ಊಹಾಪೋಹಗಳ ಮಾತೇ ಕೇಳಿ ಬರುತ್ತಿವೆ ಎಂದು ಯಶ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟು ಸಿಕ್ತು ಇಷ್ಟು ಸಿಕ್ತು ಎಂದು ಊಹಾಪೋಹಗಳನ್ನ ಹಬ್ಬಿಸಲಾಗಿದೆ. ಬುಲ್ ಷಿಟ್ ಗಳನ್ನ ತೋರಿಸಬಾರದು. ಎರಡು ದಿನ ನನ್ನ ಹೆಂಡತಿ ಹಾಗೂ ಮಗಳನ್ನು ಬಿಟ್ಟಿದ್ದದ್ದು ಕಷ್ಟವಾಗಿತ್ತು ಎಂದರು. 
ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ಮುಂದೆ ಈ ವಿಚಾರಕ್ಕೆ ಕರೆದರೆ ಖಂಡಿತ ಹೋಗುತ್ತೇನೆ ಎಂದರು.

ಭಾರತದಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗವೇ ಇಲ್ಲ: ನಾಸಿರುದ್ದೀನ್ ಶಾ ಬೇಸರ.
ಇತ್ತೀಚೆಗಷ್ಟೇ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ, ಈಗ ಮತ್ತೊಮ್ಮೆ ಭಾರತದ ಬಗ್ಗೆ ಮಾತನಾಡಿದ್ದಾರೆ. 

ಈ ಹಿಂದೆ ಭಾರತದಲ್ಲಿ ಕೆಲವರಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದ್ದ ನಾಸಿರುದ್ದೀನ್ ಶಾ, ಈಗ ಭಾರತದಲ್ಲಿ ಅಭಿಪ್ರಾಯ ಭೇದಕ್ಕೆ ಜಾಗವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ನಾಸಿರುದ್ದೀನ್ ಶಾ, ಹಕ್ಕುಗಳನ್ನು ಯಾರು ಕೇಳುತ್ತಾರೋ ಅವರಿಗೆ ಬೀಗ ಜಡಿಯಲಾಗುತ್ತದೆ, ನಟರು, ಕಲಾವಿದರು, ಸಾಹಿತಿಗಳು, ವಿದ್ವಾಂಸರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಇಷ್ಟೇ ಅಲ್ಲದೇ ಪತ್ರಕರ್ತರನ್ನೂ ಸಹ ಸುಮ್ಮನಾಗಿಸಲಾಗುತ್ತಿದೆ ಎಂದು ನಾಸಿರುದ್ಧೀನ್ ಶಾ ಆರೋಪಿಸಿದ್ದಾರೆ. 
ನಾಸಿರುದ್ದೀನ್ ಶಾ ಅವರ ಪ್ರಕಾರ, ದೇಶದಲ್ಲಿ ದ್ವೇಷದ ಗೋಡೆಗಳನ್ನು ಧರ್ಮದ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಧರ್ಮದ ಹೆಸರಿನಲ್ಲಿ ಮುಗ್ಧ ಜನರ ಹತ್ಯೆಗಳಾಗುತ್ತಿವೆ, ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಮನೆ ಮೇಲೆ ರೇಡ್ ಗಳಾಗುತ್ತಿವೆ ಪರವಾನಗಿಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ನಾಸಿರುದ್ದೀನ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮ್ಮಿಕ್ ಚಿತ್ರದ ಪೋಸ್ಟರ್ ರಿಲೀಸ್.

ಬೆಂಗಳೂರು: 2018 ರಲ್ಲಿ ಗಣೇಶ್ ಅಭಿನಯದ ಆರೇಂಜ್ ಸಿನಿಮಾ ತೆರೆ ಕಂಡಿದ್ದು, ಸದ್ಯ ಗಣೇಶ್ ಕೈಯ್ಯಲ್ಲಿ ಮೂರು ಪ್ರಾಜೆಕ್ಟ್ ಗಳಿವೆ,  ಸದ್ಯ ಗಣೇಶ್ ಗಿಮ್ಮಿಕ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ.
ನಾಗಣ್ಣ ನಿರ್ದೇಶನದ ಗಿಮ್ಮಿಕ್ ಹಾರರ್ -ಕಾಮಿಡಿ ಸಿನಿಮಾವಾಗಿದ್ದು, 2019ರಲ್ಲಿ  ತೆರೆ ಕಾಣುವ  ಗಣೇಶ್ ಅಭಿನಯದ ಮೊದಲ ಸಿನಿಮಾ ಇದಾಗಿದೆ,  ಶ್ರೀಲಂಕಾದ ಮನೆಯೊಂದರಲ್ಲಿ ಹೆಚ್ಚಿನ ಪ್ರಮಾಣದ ಶೂಟಿಂಗ್ ಮಾಡಲಾಗಿದೆ. ಜೊತೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲೂ ಕೂಡ ಶೂಟಿಂಗ್ ಮಾಡಲಾಗಿದೆ, 
ಗಿಮ್ಮಿಕ್ ನಲ್ಲಿ ರೋನಿಕಾ ಸಿಂಗ್  ರವಿಶಂಕರ್ ಗೌಡ. ಸಾಧು ಕೋಕಿಲಾ,  ಶೋಭರಾಜ್, ಸುಂದರ್ ರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ: ಪುನೀತ್ ರಾಜ್ ಕುಮಾರ್.

ಬೆಂಗಳೂರು: ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೋಧನೆ ಮುಗಿದ ನಂತರ ಕಳೆದ ತಡರಾತ್ರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದಾರೆ.

ನಮ್ಮ ಮನೆಗೆ ಐಟಿ ಅಧಿಕಾರಿಗಳು ಬಂದು ನನ್ನ ಆದಾಯ, ಹೂಡಿಕೆಗಳು, ದಾಖಲೆಗಳ ತಪಾಸಣೆ ಮತ್ತು ಪರಿಶೀಲನೆ ನಡೆಸಿರುವುದು ನಿಜ. ಯಾವುದೇ ಉದ್ಯಮಿ ಅಥವಾ ಕಲಾವಿದನ ಮನೆಗೆ ಐಟಿ ಅಧಿಕಾರಿಗಳು ಬಂದರೆಂದರೆ ಅದು ಅಕೌಂಟ್ ಗೆ ಸಂಬಂಧಪಟ್ಟದ್ದಾಗಿರುತ್ತದೆ. ನಮ್ಮ ಮನೆಗೆ ಬಂದು ಅಕೌಂಟ್ ಗಳ ಮಾಹಿತಿ ಪಡೆದು ಹೋಗಿದ್ದಾರೆ ಎಂದರು.

ಐಟಿ ಅಧಿಕಾರಿಗಳು ಬಂದರೆಂದರೆ ಅಕ್ಕಪಕ್ಕದ ಮನೆಯವರಿಗೆ, ಸಾರ್ವಜನಿಕರಿಗೆ ಹಲವು ಅನುಮಾನಗಳು ಬರುತ್ತವೆ. ಆದರೆ ಇದು ಯಾವುದೂ ಅಲ್ಲ. ಅಧಿಕಾರಿಗಳಿಗೆ ಎಲ್ಲಿಂದಲೋ ಏನೋ ಮಾಹಿತಿ ಸಿಕ್ಕಿರುತ್ತದೆ. ಅದನ್ನು ಆಧರಿಸಿ ನಮ್ಮ ಮನೆಗೆ ಬಂದಿರಬಹುದು ಎಂದು ಹಲವು ಅನುಮಾನಗಳಿಗೆ ಪುನೀತ್ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಈ ಮಧ್ಯೆ ಇಂದು ಸಂಜೆ ಹುಬ್ಬಳ್ಳಿಯಲ್ಲಿ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮದ ಆಡಿಯೊ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು ಅದರಲ್ಲಿ ಪುನೀತ್ ಭಾಗವಹಿಸಲಿದ್ದಾರೆ.

Friday, 4 January 2019

ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆ ಮೇಲೆ ಐಟಿದಾಳಿ, ಶನಿವಾರವೂ ಮುಂದುವರಿದ ಪರಿಶೀಲನೆ.

IT Raids On Top Sandalwood Stars, Producers Continue For third Day
ಬೆಂಗಳೂರು: ಸ್ಯಾಂಡಲ್‍ ವುಡ್ ನ ನಟ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರೆಗೆ ಅಧಿಕಾರಿಗಳ ದಾಳಿ ಸತತ ಮೂರನೇ ದಿನವೂ ಮುಂದುವರೆದಿದ್ದು, ಶನಿವಾರ ಕೂಡ ನಟ ಯಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆಯಲ್ಲಿ ಲೆಕ್ಕಪತ್ರಗಳ ಪರಿಶೀಲನೆ ಮುಂದುವರೆದಿದೆ.
ನಿರ್ಮಾಪಕ ವಿಜಯ್ ಕಿರಗಂದೂರ್, ಪುನೀತ್ ಮನೆಯಲ್ಲಿ ಶೋಧ ಮುಕ್ತಾಯವಾಗಿದ್ದು, ನಟ ಶಿವರಾಜ್ ಕುಮಾರ್ ಮನೆಯಲ್ಲಿ ಇಂದು ಬೆಳಗ್ಗೆಯವರೆಗೂ ಪರಿಶೀಲನಾ ಕಾರ್ಯ ಮುಂದುವರಿಯಿತು. ಪುನೀತ್ ರಾಜ್‍ಕುಮಾರ್ ಮನೆಯಲ್ಲಿನ ಶೋಧ ಕಾರ್ಯ ಶುಕ್ರವಾರ ರಾತ್ರಿ 11.30ಕ್ಕೆ ಅಂತ್ಯಗೊಂಡಿದೆ. ಆದರೆ ಯಶ್ ಮತ್ತು ಸುದೀಪ್ ಮನೆಯಲ್ಲಿ ಪರಿಶೀಲನೆ ಮುಂದುವರಿಯಲಿದೆ. ಜೊತೆಗೆ ನಿರ್ಮಾಪಕರಾದ ಸಿ.ಆರ್.ಮನೋಹರ್, ರಾಕ್‍ಲೈನ್ ವೆಂಕಟೇಶ್, ಜಯಣ್ಣ ಮನೆಯಲ್ಲಿ ಇಂದು ಕೂಡ ಪರಿಶೀಲನೆ ಮುಂದುವರಿಯಲಿದೆ.
ನಿನ್ನೆ ನಟ ಪುನೀತ್ ರಾಜಕುಮಾರ್​ ಮನೆ‌ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ನಿವಾಸಕ್ಕೆ ಆಡಿಟರ್ಸ್ ಗಳನ್ನು ಕರೆಸಿಕೊಂಡಿದ್ದರು. ಪುನೀತ್ ರಾಜ್ ಕುಮಾರ್​ ಕುಟುಂಬದ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತಿರುವ ಇಬ್ಬರು ಆಡಿಟರ್ಸ್ ಇದೀಗ ನಿವಾಸಕ್ಕೆ ಆಗಮಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈಗಾಗಲೇ ಐಟಿ ಅಧಿಕಾರಿಗಳು ಪುನೀತ್ ಆರ್ಥಿಕ ವ್ಯವಹಾರಗಳು ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡಿದ್ದಾರೆ. ಜಂಟಿ ಆಯುಕ್ತ ರಮೇಶ್​ ಅವರೇ ಖುದ್ದು, ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರನ್ನ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ.
ಯಶ್, ರಾಕ್ ಲೈನ್ ಮನೆಯಲ್ಲಿ ಮುಂದುವರೆದ ಶೋಧ
ಸ್ಟಾರ್ ನಟರ ಮನೆ ಮೇಲಿನ ರೇಡ್ ಒಂದು ಹಂತಕ್ಕೆ ಮುಕ್ತಾಯವಾಗಿದ್ದರೂ ನಟ ಯಶ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ನಿವಾಸದಲ್ಲಿನ ಶೋಧಕಾರ್ಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ರಣವಿಕ್ರಮ ಬೆಡಗಿ ಅದಾ ಶರ್ಮಾ ಈ ಹಾಟ್ ಅವತಾರಕ್ಕೆ ಅಭಿಮಾನಿಗಳು ದಂಗು, ವಿಡಿಯೋ ವೈರಲ್!

Adah Sharma
ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಅಭಿನಯಿಸಿದ್ದ ಅದಾ ಶರ್ಮಾರ ಅವತಾರ ಕಂಡು ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
ಹೌದು, ಧೂಮಪಾನದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅದಾ ಶರ್ಮಾ ಇದೀಗ ಮಧ್ಯಪಾನ ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. 
ವಿಡಿಯೋದಲ್ಲಿ ಬೆಲ್ಲಿ ಡ್ಯಾನ್ಸ್ ಮಾಡುವ ಅದಾ ಶರ್ಮಾ ನಂತರ ಬಾಟಲ್ವೊಂದನ್ನು ಹಿಡಿದು ಕುಡಿಯುವಂತೆ ನಟನೆ ಮಾಡುತ್ತಾರೆ. ನಂತರ ಮುಖಕ್ಕೆ ದೆವ್ವದ ರೀತಿಯ ಮೇಕಪ್ ಮಾಡಿಕೊಂಡು ಮಧ್ಯಪಾನ ಸೇವನೆ ಮಾಡುವುದರಿಂದ ನೀವು ಬೇಗ ಸಾವಿಗೆ ಗುರಿಯಾಗುತ್ತೀರಾ ಎಂಬುದನ್ನು ಮಾರ್ಮಿಕವಾಗಿ ತೋರಿಸಿದ್ದಾರೆ.https://www.instagram.com/p/BsCyPPnH-oR/?utm_source=ig_web_copy_link

"ದಾಖಲೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಕೊಡಿ’

ಬೆಂಗಳೂರು: ಶುಕ್ರವಾರವೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ಮುಂದುವರಿದಿದೆ. ಪುನೀತ್ ಮತ್ತು ಪತ್ನಿ ಅಶ್ವಿನಿ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಐಟಿ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಪುನೀತ್ ರಾಜ್‍ಕುಮಾರ್ ಉತ್ತರಿಸುತ್ತಿದ್ದು, ನನ್ನ ವ್ಯವಹಾರದ ಬಗ್ಗೆ ನನ್ನ ಬಳಿ ದಾಖಲೆ ಇವೆ. ಆದರೆ ದಾಖಲೆ ಸಲ್ಲಿಸಲು ಸ್ವಲ್ಪ ಸಮಯ ಬೇಕು. ಸಾಕಷ್ಟು ವ್ಯವಹಾರ ಮಾಡಿರುವುದರಿಂದ ಸ್ವಲ್ಪ ಗೊಂದಲವಿದೆ. ಪ್ರತಿಯೊಂದಕ್ಕೂ ರಶೀದಿ ಇಟ್ಟಿದ್ದೀನಿ. ಹೀಗಾಗಿ ದಾಖಲೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಕೊಡಿ ಎಂದು ನಟ ಪುನೀತ್ ಸಮಾಧಾನವಾಗಿಯೇ ಅಧಿಕಾರಿಗಳ ಬಳಿ ಕಾಲವಕಾಶ ಕೇಳಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಮುಂದುವರಿದ ಐಟಿ ದಾಳಿ: ನಟ ಯಶ್‍ಗಿದೆ 40 ಕೋಟಿ ರೂ. ಸಾಲ..!
ಬೆಂಗಳೂರು: ಸ್ಯಾಂಡಲ್​ವುಡ್​ ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಎರಡನೇ ದಿನವೂ ಐಟಿ ದಾಳಿ ಮುಂದುವರೆದಿದೆ. ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಐಟಿ ಅಧಿಕಾರಿಗಳ ಪ್ರಶ್ನೆಗೆ ಸಹನೆಯಿಂದ ಯಶ್ ಅವರ ತಾಯಿ ಸಹನೆಯಿಂದ ಉತ್ತರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮನೆಯಲ್ಲಿರುವ ಚಿನ್ನ, ಆಸ್ತಿ ಪತ್ರ, ಬ್ಯಾಂಕ್ ವಿವರಗಳನ್ನ​ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಯಶ್ ಮನೆಯಲ್ಲಿ 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450 ಗ್ರಾಂ ಚಿನ್ನ. ಒಂದು ವಜ್ರದ ಸರ ಹಾಗೂ ಎರಡು ಪ್ಲಾಟಿನಮ್ ಸರಗಳು ದೊರೆತಿವೆ ಎನ್ನಲಾಗುತ್ತಿದೆ.
ಇನ್ನು ಯಶ್ 8 ಬ್ಯಾಂಕ್ ಖಾತೆ ಹೊಂದಿದ್ದು, ನಾಲ್ಕು ಖಾತೆ ತಾಯಿಯೊಂದಿಗೆ ಜಂಟಿ ಖಾತೆ ಹೊಂದಿದ್ದಾರೆ. ಎರಡು ಬ್ಯಾಂಕ್ ನಲ್ಲಿ ಯಶ್ ಅವರಿಗೆ 40 ಕೋಟಿ ಸಾಲ ಇದೆ. ಬ್ಯಾಂಕ್ ನಲ್ಲಿ 13 ಕೋಟಿ, ಮತ್ತೊಂದರಲ್ಲಿ 17 ಕೋಟಿ ಸಾಲ ಇದೆ ಎಂದು ಹೇಳಲಾಗುತ್ತಿದೆ. ಮಂಡ್ಯದ ಬಳಿ ಜಮೀನೂ ಖರೀದಿ ಮಾಡಿರುವುದಾಗಿ ಯಶ್ ತಾಯಿ ಹೇಳಿದ್ದಾರೆ. ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಇಂದು ಯಶ್​ ಉತ್ತರಿಸಲಿದ್ದಾರೆ.

"ಯಜಮಾನ'ನ ಶುಭಾಶಯಗಳು''


ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಇದೀಗ ನಾಡಿನ ಸಮಸ್ತ ಜನತೆಗೆ ಟ್ವೀಟರ್ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಹೌದು, ಅಭಿಮಾನಿಗಳ ಡಿ ಬಾಸ್ ಟ್ವೀಟರ್ ನಲ್ಲಿ "ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. #Yajamana' ಎಂದು ಶುಭಾಶಯ ಕೋರಿದ್ದು, ಇದರ ಜೊತೆಗೆ "ಯಜಮಾನ'ನ ಹೊಸ ಲುಕ್ ಕೂಡ ತೋರಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಈ ವರ್ಷ "ಯಜಮಾನ' ಬರುತಿದ್ದಾನೆ, ಅದೂ ಡಿಫ್ರೆಂಟ್ ಲುಕ್‍ನಲ್ಲಿ ಎಂದು ಟ್ವೀಟ್‌ನ ರಿಟ್ವೀಟ್‌ ಮಾಡಿ ತರಹೇವಾರಿ ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ "ನಟಸಾರ್ವಭೌಮ''


ಐಟಿ ದಾಳಿ ಹಿನ್ನೆಲೆಯಲ್ಲಿ ಶನಿವಾರ (ನಾಳೆ) ನಡೆಯಬೇಕಿದ್ದ "ನಟಸಾರ್ವಭೌಮ' ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್‍ರಾಜಕುಮಾರ್ ಗೈರಾಗುವ ಸಾಧ್ಯತೆಯಿದೆ. ಹುಬ್ಬಳ್ಳಿಯಲ್ಲಿ ನಾಳೆ ಆಡಿಯೋ ರಿಲೀಸ್​ ಕಾರ್ಯಕ್ರಮ ನಡೆಯಲಿದ್ದು, ಈ ಹಿಂದೆಯೇ ದಿನಾಂಕ ನಿಗದಿಯಾಗಿತ್ತು.
ಆದರೆ, ಗುರುವಾರದಿಂದ ಪುನೀತ್‍ ರಾಜಕುಮಾರ್ ಹಾಗೂ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಸೇರಿದಂತೆ ನಟ ನಿರ್ಮಾಪಕರ​​ ಮನೆ ಮೇಲೆ ಐಟಿ ದಾಳಿಯಾಗಿದೆ. ಅಲ್ಲದೇ ಸತತ ಎರಡು ದಿನಗಳಿಂದ ನಡೆಯುತ್ತಿರುವ ತನಿಖೆಗೆ ಪುನೀತ್​ ಮನೆಯಲ್ಲಿಯೇ ಇದ್ದುಕೊಂಡು ಸಹಕರಿಸುತ್ತಿದ್ದು, ನಾಳೆಯೂ ಕೂಡ ಅಧಿಕಾರಿಗಳ ತನಿಖೆ ಮುಂದುವರೆದರೆ ಕಾರ್ಯಕ್ರಮಕ್ಕೆ ಪುನೀತ್ ಹಾಜರಾಗಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ.
ಇನ್ನು ನಾಳೆ ನೆಹರು ಮೈದಾನದಲ್ಲಿ ನಡೆಯಲಿರುವ ಆಡಿಯೋ ಬಿಡುಗಡೆ ಕಾರ್ಯಕ್ರಮದ ಎಲ್ಲ ಸಿದ್ಧತೆ ಭರದಿದ ಸಾಗಿದ್ದು, ಐಟಿ ದಾಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಕ್ಯಾನ್ಸಲ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಚಿತ್ರದ ನಿರ್ದೇಶಕ ಪವನ್ ಒಡೆಯರ್​, ಕಾರ್ಯಕ್ರಮಕ್ಕೆ ಈಗಾಗಲೇ ಸಾಕಷ್ಟು ತಯಾರಿಯಾಗಿದೆ.
ಅಲ್ಲದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಗಾಗಲೇ ದೂರದಿಂದ ಸಾಕಷ್ಟು ಜನರು ಬರುತ್ತಿದ್ದು, ಕಾರ್ಯಕ್ರಮವನ್ನು ನಿಲ್ಲಿಸುವ ಯೋಚನೆಯೇ ಇಲ್ಲ. ಈ ಕುರಿತು ಗೊಂದಲ ಬೇಡ ನೂರಕ್ಕೆ ನೂರರಷ್ಟು ಕಾರ್ಯಕ್ರಮ ನಡೆಯೋದು ಪಕ್ಕಾ. ಕಾರ್ಯಕ್ರಮದಲ್ಲಿ ಎಲ್ಲರೂ ಹಾಜರಾಗಲಿದ್ದಾರೆ. ಎಲ್ಲರೂ ಬನ್ನಿ ಎಂದು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ತಮ್ಮ ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ.  

ಶಬರಿಮಲೆ ಪ್ರತಿಭಟನೆ: 48 ಗಂಟೆಗಳಲ್ಲಿ 266 ಬಂಧನ ಮುನ್ನೆಚ್ಚರಿಕ ಕ್ರಮವಾಗಿ 334 ಜನ ವಶಕ್ಕೆ..!

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ನಿರ್ಬಂಧಿತ ವಯಸ್ಸಿನ ಮಹಿಳೆಯರು ಪ್ರವೇಶಮಾಡಿದ ನಂತರ ಕೇರಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಪ್ರತಿಭಟನೆ ಹಿಂಸಾಚಾರದ ರೂಪ ಪಡೆಯುವುದನ್ನು ತಡೆಗಟ್ಟಲು ಪೊಲೀಸರು ಹಲವು ಕ್ರಮ ಕೈಗೊಂಡಿದ್ದಾರೆ. 
ಹಿಂಸಾಚಾರದ ಪ್ರತಿಭಟನೆಯಲ್ಲಿ ತೊಡಗಿರುವವರನ್ನು ಪೊಲೀಸರು ಮುಲಾಜಿಲ್ಲದೇ ಬಂಧಿಸಿದ್ದು, ಈ ರೀತಿಯ ಪ್ರತಿಭಟನೆಯಲ್ಲಿ ತೊಡಗಿ ಬಂಧನಕ್ಕೊಳಗಾದ ಪ್ರತಿಭಟನಾಕಾರರ ಸಂಖ್ಯೆ 48 ಗಂಟೆಗಳಲ್ಲಿ 266 ಕ್ಕೆ ಏರಿಕೆಯಾಗಿದೆ.  ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬರೊಬ್ಬರಿ 334 ಜನರನ್ನು ವಶಕ್ಕೆ ಪಡೆದಿದ್ದಾರೆ. 
ಹಿಂದೂ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆಯ ನಂತರ ಹಿಂಸಾಚಾರವಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಈ ರೀತಿಯ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ ಕೇರಳ ರಾಜ್ಯ ಪೊಲೀಸರು ಆಪರೇಷನ್ ಬ್ರೋಕನ್ ವಿಂಡೋ ಎಂಬ ಕಾರ್ಯಾಚಾರಣೆಯನ್ನು ಪ್ರಾರಂಭಿಸಿದ್ದಾರೆ. 
ಕಾರ್ಯಾಚರಣೆಯ ಭಾಗವಾಗಿ ಹಿಂಸಾಚಾರದಲ್ಲಿ ತೊಡಗಿರುವ ಪ್ರತಿಭಟನಾ ನಿರತರನ್ನು ಬಂಧಿಸುವುದಷ್ಟೇ ಅಲ್ಲದೇ ಅವರ ಮೊಬೈಲ್ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡು ಡಿಜಿಟಲ್ ಪರಿಶೀಲನೆಗೆ ನೀಡಲಾಗುತ್ತದೆ ಹಾಗೂ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಶಂಕೆಯಿಂದ ಪ್ರತಿಭಟನಾಕಾರರ ಮನೆಗಳ ಮೇಲೆ ದಾಳಿಯನ್ನೂ ನಡೆಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 
ಇನ್ನು ಸಾಮಾಜಿಕ ಜಾಲತಾಣದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕೇರಳ ಪೊಲೀಸ್ ಇಲಾಖೆ ತಿಳಿಸಿದೆ. 

ಮಾಲ್ಡೀವ್ಸ್‌ನಲ್ಲಿ ಬಿಕಿನಿ ತೊಟ್ಟು ಫೋಟೋಗೆ ಪೋಸ್ ಕೊಟ್ಟ ಬಾಲಿವುಡ್ ನಟಿ ದಿಶಾ ಪಟಾಣಿ, ವೈರಲ್!

Disha Patani

ಬಾಲಿವುಡ್ ನಟಿ ದಿಶಾ ಪಟಾನಿ ಅವರು ಸದ್ಯ ಮಾಲ್ಡೀವ್ಸ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದು ಹೊಸ ವರ್ಷದ ಸಂಭ್ರಮದಲ್ಲಿ ತೊಡಗಿದ್ದಾರೆ. 

ಮಾಲ್ಡೀವ್ಸ್ ನ ಬೀಚ್ ಗಳಲ್ಲಿ ಬಿಕಿನಿ ತೊಟ್ಟು ರಂಗೇರಿಸುತ್ತಿರುವ ದಿಶಾ ಹೊಸ ವರ್ಷದ ಸಂಭ್ರಮವನ್ನು ಮಾಲ್ಡೀವ್ಸ್ ನಲ್ಲಿ ಸವಿಯಲಿದ್ದಾರೆ. 
ತಮ್ಮ ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುವ ದಿಶಾ ಪಟಾಣಿ ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಜತೆ ವಿರಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
                                                                                                                  -immu
C

ಜಾಕ್ ಮಂಜುಗೆ ಕರ್ನಾಟಕದಾದ್ಯಂತ ರಜನಿಕಾಂತ್ 'ಪೆಟ್ಟಾ' ಚಿತ್ರದ ವಿತರಣೆ ಹಕ್ಕು!

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರ ಇದೇ ಸಂಕ್ರಾತಿ ಹಬ್ಬಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಪೆಟ್ಟಾ ಚಿತ್ರದ ಕನ್ನಡ ಡಬ್ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಆವೃತ್ತಿಯನ್ನು ನಿರ್ಮಾಪಕ ಜಾಕ್ ಮಂಜು ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.
ಜನವರಿ 11ಕ್ಕೆ ರಾಜ್ಯದಲ್ಲಿ ಪೆಟ್ಟಾ ಚಿತ್ರ ಸುಮಾರು 350ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಇನ್ನು ಕನ್ನಡೇತ್ತರ ನಟನ ಚಿತ್ರವೊಂದು ಇಷ್ಟೊಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. 
ಜನವರಿ 11ರಂದು ತಮಿಳು, ತೆಲುಗು ಮತ್ತು ಹಿಂದಿ ಆವೃತ್ತಿಯ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಯಾಗುತ್ತಿದ್ದು ಎರಡು ವಾರಗಳ ಬಳಿಕ ಕನ್ನಡ ಡಬ್ ಚಿತ್ರ ಬಿಡುಗಡೆಯಾಗಲಿದೆ ಎಂದು ಜಾಕ್ ಮಂಜು ತಿಳಿಸಿದ್ದಾರೆ.
ಕನ್ನಡೇತ್ತರ ಚಿತ್ರವನ್ನು ರಾಜ್ಯದಲ್ಲಿ ವಿತರಣೆ ಮಾಡುತ್ತಿರುವುದು ಇದೇ ಮೊದಲು. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ರಜನಿಕಾಂತ್ ಅವರ ಜತೆ ಒಡನಾಟ ಇಟ್ಟುಕೊಂಡಿದ್ದೆ. ಆದರೆ ಇದೇ ಮೊದಲ ಬಾರಿಗೆ ಅವರ ಚಿತ್ರವನ್ನು ವಿತರಣೆ ಮಾಡುತ್ತಿದ್ದೇನೆ ಎಂದು ಜಾಕ್ ಮಂಜು ತಿಳಿಸಿದ್ದಾರೆ.

ಪಿಎಂ ನರೇಂದ್ರ ಮೋದಿ ಬಯೋಪಿಕ್ ನಲ್ಲಿ ವಿವೇಕ್ ಒಬೇರಾಯ್ ನಟನೆ..!

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ ಪಿಎಂ ನರೇಂದ್ರ ಮೋದಿ ಬಯೋಪಿಕ್‌ ಚಿತ್ರದಲ್ಲಿ ಪ್ರತಿಭಾವಂತ ಬಾಲಿವುಡ್‌ ನಟ ವಿವೇಕ್‌ ಒಬೇರಾಯ್‌ ಅವರು ಮೋದಿ ಪಾತ್ರದಲ್ಲಿ ನಟಿಸಲಿದ್ದಾರೆ.
ಈಚೆಗೆ ಸ್ವಲ್ಪ ಕಾಲ ಚಿತ್ರರಂಗದಿಂದ ದೂರವಿರುವ ಒಬೆರಾಯ್‌ ಅವರು ಮೋದಿ ಬಯೋಪಿಕ್‌ ಚಿತ್ರದಲ್ಲಿ ಮೋದಿ ಪಾತ್ರವನ್ನು ವಹಿಸುವರೆಂಬ ಸುದ್ದಿಯನ್ನು  ಖ್ಯಾತ ಚಿತ್ರ ವಿಮರ್ಶಕ ಮತ್ತು ವಾಣಿಜ್ಯ ವಿಶ್ಲೇಷಕ ತರಣ್‌ ಆದರ್ಶ್‌ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 
ಈ ಹಿಂದೆ ಮೇರಿ ಕೋಮ್‌ ಬಯೋಪಿಕ್‌ ನಿರ್ದೇಶಿಸಿದ್ದ ಉಮಂಗ್‌ ಕುಮಾರ್‌ ಮೋದಿ ಬಯೋಪಿಕ್‌ ಚಿತ್ರವನ್ನು ನಿರ್ದೇಶಿಸಲಿದ್ದು, ಸಂದೀಪ್‌ ಸಿಂಗ್‌ ನಿರ್ಮಿಸಲಿದ್ದಾರೆ. 
ಚಿತ್ರದ ಮೊದಲ ಪೋಸ್ಟರ್‌ ಇದೇ ಜನವರಿ 7ರಂದು ಬಿಡುಗಡೆಯಾಗಲಿದೆ. ಚಿತ್ರೀಕರಣ ಇದೇ ಜನವರಿ ತಿಂಗಳ ಮಧ್ಯ ಭಾಗದಿಂದ ಆರಂಭವಾಗಲಿದೆ ಎಂದು ತರಣ್‌ ಆದರ್ಶ್‌ ತಿಳಿಸಿದ್ದಾರೆ. 
                                                                                                                                                    - immu

ತಮ್ಮ 50 ನೇ ಚಿತ್ರ ಅಧಿರ ನಿರ್ದೇಶಿಸಲಿದ್ದಾರೆ ನಟ ಉಪೇಂದ್ರ..!

ಬೆಂಗಳೂರು:  'ಅಧಿರ' ಉಪೇಂದ್ರ ನಟನೆಯ ಬಹುನಿರೀಕ್ಷಿತ 50ನೇ ಸಿನಿಮಾ ಇದಾಗಲಿದ್ದು, ಸದ್ದಿಲ್ಲದೆ ಅದ್ರ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಹಾಗೆಯೇ ಸಿನಿಮಾಗೆ ಹೊಸ ಟ್ವಿಸ್ಟ್ ಸಿಕ್ಕಿದೆ, ಉಪೇಂದ್ರ ತಮ್ಮ 50ನೇ ಸಿನಿಮಾದ ಜವಾಬ್ದಾರಿಯನ್ನು ತಾವೇ ಹೊತ್ತಿದ್ದಾರೆ.
ಸದ್ಯ ಐ ಲವ್ ಯು ಸಿನಿಮಾದ ಶೂಟಿಂಗ್​ನಲ್ಲಿ ಉಪೇಂದ್ರ ಬ್ಯುಸಿ ಇದ್ದಾರೆ,
ಸಿನಿಮಾಗೆ ಅಧಿರ ಅಂತ ಟೈಟಲ್ ಇಟ್ಟಿರೋ ಚಿತ್ರತಂಡ, ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಅಧಿರ ಅಂದ್ರೆ ಮಿಂಚು ಎಂದರ್ಥ. ಮಿಂಚಿನಂತಹ ತರುಣನೊಬ್ಬನ ಕಥೆ ಆಧಾರಿತ ಚಿತ್ರ ಇದಾಗಿದ್ದು, ಉಪ್ಪಿ ಇಲ್ಲಿ ಅಧಿರನಾಗಿ ಕಮಾಲ್ ಮಾಡಲಿದ್ದಾರೆ.
ನಿರ್ಮಾಪಕ ಕನಕಪುರ ಶ್ರೀನಿವಾಸ್ ಈ ಸಿನಿಮಾನ ನಿರ್ಮಾಣ ಮಾಡುತ್ತಿದ್ದು, ಕನ್ನಡ ಮತ್ತು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಅಧಿರ ತಯಾರಾಗಲಿದೆ.   ಸುಮಾರು 50 ಕೋಟಿ ರೂ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ,  ಏಪ್ರಿಲ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. 
ಸಿನಿಮಾದಲ್ಲಿ ಪ್ರಸಿದ್ಧ ನಾಯಕಿಯರು ನಟಿಸಲಿದ್ದಾರೆ ಎಂದು ನಿರ್ಮಾಪಕ ಶ್ರೀನಿವಾಸ್ ಹೇಳಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆಗೆ  ಕಲಾವಿದರ ಪಟ್ಟಿ ಅಂತಿಮವಾಗಲಿದೆ ಎಂದು ತಿಳಿಸಿದ್ದಾರೆ, 
ಸೆಕಠಾರಿ ವೀರ ಸುರ ಸುಂದರಾಂಗಿ ಸಿನಿಮಾ ಮೂಲಕ ಪೀರಿಯಾಡಿಕ್ ಪಾತ್ರಗಳಿಗೂ ಸೈ ಅನಿಸಿಕೊಂಡಿದ್ದ ಉಪೇಂದ್ರ, ಇದೀಗ 50ನೇ ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ.  ಸ್ವತಃ ಉಪೇಂದ್ರ ಅವರೇ ನಿರ್ದೇಶನಕ್ಕಿಳಿದಿರುವುದು ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರಿಕ್ಷೆ ಮೂಡಿಸಿದೆ.

ಸ್ಯಾಂಡಲ್ವುಡ್ ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ಮುಂದುವರೆದ ಐಟಿ ದಾಳಿ, ಏನೆಲ್ಲಾ ಸಿಕ್ತು?
   ಬೆಂಗಳೂರು: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಐಟಿ ದಾಳಿಗೆ ಸ್ಯಾಂಡಲ್ವುಡ್ ಗುರಿಯಾಗಿದೆ. ಹೌದು ಕನ್ನಡದ ಸ್ಟಾರ್ ನಟರು, ಹಾಗೂ ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 24 ಗಂಟೆಗಳಿಂದ ಅಧಿಕಾರಿಗಳು ಆಸ್ತಿ ಪಾಸ್ತಿ ಕುರಿತಂತೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. 

 
ನಿನ್ನೆ ಬೆಳಗ್ಗೆ ಬೆಂಗಳೂರಿನ ಸುಮಾರು 25 ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಂಗದೂರು, ದಿ ವಿಲನ್ ನಿರ್ಮಾಪಕ ಸಿ.ಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್, ಮತ್ತು ಜಯಣ್ಣ ಅವರ ಮನೆಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಇನ್ನು ಜೆ.ಪಿ ನಗರದಲ್ಲಿರುವ ನಟ ಸುದೀಪ್ ಮನೆ, ಸದಾಶಿವನಗರದಲ್ಲಿರುವ ಶಿವರಾಜ್ ಕುಮಾರ್ ಹಾಗೂ ಪುನೀತ್ ಮನೆ, ಕತ್ರಿಗುಪ್ಪೆಯಲ್ಲಿರುವ ನಟ ಯಶ್ ಮನೆ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿ ಆದಾಯದ ವಿವರಣೆಯನ್ನು ಕಲೆ ಹಾಕುತ್ತಿದ್ದಾರೆ.
ಸದ್ಯ ಐಟಿ ಅಧಿಕಾರಿಗಳು ದಾಳಿಯಲ್ಲಿ ನಟರು, ನಿರ್ಮಾಪಕರ ಮನೆಯಲ್ಲಿ ಆಸ್ತಿ ವಿವರ, ಆದಾಯ ಮೂಲ, ಚಿನ್ನಾಭರಣ ಸೇರಿದಂತೆ ಬ್ಯಾಂಕ್ ಖಾತೆಗಳ ವಿವರ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

Thursday, 3 January 2019

ರಕ್ಷಿತ್ ಶೆಟ್ಟಿ ಜೀವನದಲ್ಲಿ ಎಲ್ಲಾ ನೀತಿ, ನಿಯಮ, ನಿರ್ಧಾರ ಮಾಡೋದು 'ಚಾರ್ಲಿ'!

ಬೆಂಗಳೂರು: ರಕ್ಷಿತ್ ಶೆಟ್ಟಿ ಜೀವನ, ಅಲ್ಲಿ ನಿರ್ಧಾರ ಕೈಗೊಳ್ಳುವವರು ಚಾರ್ಲಿ. ಇದನ್ನು ನೋಡಿ ಆಶ್ಚರ್ಯವಾಗುತ್ತಿಯೇ? ಹೌದು 777 ಚಾರ್ಲಿ ಸಿನಿಮಾ  ಪೋಸ್ಟರ್ ನಲ್ಲಿ ಬರೆದಿರುವ ಈ ಸಾಲುಗಳು ಎಲ್ಲರ ಗಮನ ಸೆಳೆಯುತ್ತಿವೆ.
ಸಿನಿಮಾ ಕಥೆಗೆ ಈ ಸಾಲುಗಳು ಬಹಳ ಪ್ರಸ್ತುತ ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ,  ಸಿನಿಮಾದಲ್ಲಿ ರಕ್ಷಿತ್ ಒಂಟಿ ಜೀವನ, ಅತನ ಕೋಪದ ಸ್ವಭಾವದ ಕಾರಣ ಯಾರ ಜೊತೆಗೆ ಆತ ಸೇರುವುದಿಲ್ಲ, ಹೀಗಾಗಿ ಸಮಾಜದಿಂದ ದೂರ ಇರುತ್ತಾನೆ. ಅವನ ಜೊತೆಗಿರುವ ನಾಯಿ  ಆತನ ಸ್ವಭಾವಕ್ಕೆ ಪೂರ್ತಿ ವಿರುದ್ಧವಾದದ್ದು, ಹೈಪರ್ ಆ್ಯಕ್ಟಿವ್,
ರಕ್ಷಿತ್ ಜೀವನಕ್ಕೆ ಚಾರ್ಲಿ ಬಂದ ಮೇಲೆ, ಹೇಗೆ ಆತನ ಜೀವನ ಶೈಲಿ ಬದಲಾಗುತ್ತದೆ ಎಂಬ ಬಗ್ಗೆ ಸಿನಿಮಾ ಕಥೆಯಿದೆ. ಇದೊಂದು ಅದ್ಭುತ ಕಥೆಯಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 
2019ರ ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ, ಮಾರ್ಚ್ ತಿಂಗಳಿನಲ್ಲಿ  ಮತ್ತೆ ಶೂಟಿಂಗ್ ಆರಂಭವಾಗಲಿದೆ.  ಸದ್ಯ ಅವನೇ ಶ್ರೀಮನ್ನಾರಾಯಣ ಶೂಟಿಂಗ್ ಶೇ. 30 ರಷ್ಟುಪ ಮುಗಿದಿದ್ದು, ಜೂನ್ ತಿಂಗಳ ಅಂತ್ಯದೊಳಗೆ ಸಿನಿಮಾ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

ನಾನು ತಪ್ಪು ಮಾಡಿಲ್ಲ, ಹಾಗಾಗಿ ಭಯವಿಲ್ಲ, ಐಟಿ ತನಿಖೆಗೆ ಸಹಕಾರ ನೀಡುವೆ: ಸುದೀಪ್

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ನಡೆದಿರುವ  ಐಟಿ ದಾಳಿಗೆ ಸ್ಟಾರ್ ನಟರು ಹಾಗೂ ನಿರ್ಮಾಪಕರು ಶಾಕ್ ಆಗಿದ್ದಾರೆ.

ಮನೆ ಮೇಲಿನ ಐಟಿ ದಾಳಿ ವಿಷಯ ಗೊತ್ತಾಗುತ್ತಿದ್ದಂತೆ ಮಂಡ್ಯ ಜಿಲ್ಲೆ ಪಾಂಡವಪುರ ಬಳಿ ಪೈಲ್ವಾನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಕಿಚ್ಚ ಸುದೀಪ್ , ಶೂಟಿಂಗ್  ಅರ್ಧಕ್ಕೆ ಬಿಟ್ಟು  ಬೆಂಗಳೂರಿನತ್ತ ದೌಡಾಯಿಸಿದ್ದಾರೆ.

ಜೆಪಿ ನಗರದಲ್ಲಿನ  ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹಾಗಾಗಿ ಭಯ ಪಡಬೇಕಾದ ಅಗತ್ಯವಿಲ್ಲ.  ಆದಾಯ ಇಲಾಖೆ ಅಧಿಕಾರಿಗಳು ನಡೆಸುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಐಟಿ ಅಧಿಕಾರಿಗಳು ಕಾಂಪೌಂಡ್ ಹಾರಿ ಮನೆಗೆ ಬಂದಿಲ್ಲ. ಗೇಟಿನ ಮೂಲಕವೇ ಮನೆ ಒಳಗಡೆ ಪ್ರವೇಶಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ತಾಯಿ ಒಬ್ಬರೇ ಇದುದ್ದರಿಂದ ಸ್ವಲ್ಪ ಗಾಬರಿಗೊಂಡಿದ್ದರು. ಹಾಗಾಗಿ ಶೂಟಿಂಗ್ ಕೈ ಬಿಟ್ಟು  ಬೆಂಗಳೂರಿಗೆ ಬಂದಿದ್ದಾಗಿ ಪ್ರತಿಕ್ರಿಯಿಸಿದರು..

ಈ ದಾಳಿ ಹಿಂದೆ ರಾಜಕೀಯ  ಕೈವಾಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸುದೀಪ್,  ಮೂರು ಚಿತ್ರಗಳ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ  ದಾಳಿ ನಡೆದಿದೆ. ಯಾವುದೇ ಸಾಕ್ಷ್ಯಧಾರ ಇಲ್ಲದೆ ಸುಖಾ ಸುಮ್ಮನೆ ಬೇರೆಯವರ ಆರೋಪ ಮಾಡುವುದು ಸರಿಯಲ್ಲ. ಹಾಗಾಗಿ ಆ ಕುರಿತ ಪ್ರಶ್ನೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ ಎಂದರು.

ಶಿವಣ್ಣನ 'ಕವಚ''ದಲ್ಲಿ ಮೂಡಿ ಬಂತು ರಾಜಣ್ಣನ 'ಹೊಸ ಬೆಳಕು'..!


ಬೆಂಗಳೂರು: ಡಾ. ರಾಜ್ ಕುಮಾರ್ ಅಭಿನಯದ "ಹೊಸಬೆಳಕು" ಚಿತ್ರದ ಪ್ರಸಿದ್ದ ಗೀತೆ "ಹೊಸಬೆಳಕು ಮೂಡುತಿದೆ...." ಇದೀಗ ಅವರ ಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ "ಕವಚ"ದಲ್ಲಿ ರೀಮಿಕ್ಸ್ ರೂಪದಲ್ಲಿ ಹೊಸದಾಗಿ ಮೂಡಿ ಬರುತ್ತಿದೆ. "ಈ ರೆಟ್ರೋ ಟ್ರ್ಯಾಕ್ ಅನ್ನು ಕವಚದಲ್ಲಿ ಕಥೆಗೆ ಅನುಗುಣವಾಗಿ ಮರುಸೃಷ್ಟಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಜಿವಿಆರ್ ವಾಸು ಹೇಳಿದ್ದಾರೆ. ಹಾಡಿನ ಹೊಸ ಆವೃತ್ತಿಯು ಅರ್ಜುನ್ ಜನ್ಯ ಸಂಗೀತ ಹೊಂದಿದ್ದರೆ ವಿಜಯ್ ಪ್ರಕಾಶ ಅವರ ಕಠಸಿರಿಯಲ್ಲಿ ಒಡಮೂಡಿದೆ.
"ಒಪ್ಪಂ"ನ ಯಥಾವತ್ ನಕಲಲ್ಲ...!
ಶಿವರಾಜ್ ಕುಮಾರ್ ಅಭಿನಯದ "ಕವಚ" ಚಿತ್ರ ಮೋಹನ್ ಲಾಲ್ ಅಭಿನಯದ ಮಲಯಾಳಂ ನ "ಒಪ್ಪಂ" ನ ಯಥಾವತ್ ನಕಲಲ್ಲ ಎಂದು ನಿರ್ದೇಶಕ ವಾಸು ಹೇಳಿದ್ದು ಚಿತ್ರ "ಒಪ್ಪಂ" ರೀಮೇಕ್ ಆಗಿದ್ದರೂ ಕನ್ನಡದ ಸೊಗಡು ಹೊಂದಿರಲಿದೆ. ನಟ ಶಿವರಾಜ್ ಕುಮಾರ್ ಯಾವುದೇ ಕಾರಣಕ್ಕೆ ರೀಮೇಕ್ ಚಿತ್ರ ಅಥವಾ ಯಥಾವತ್ ಚಿತ್ರಕ್ಕೆ ಇಒಪ್ಪಿಲ್ಲ, ಚಿತ್ರಕಥೆಯನ್ನು ಮರುಸೃಷ್ಟಿಸಿದ ಬಳಿಕವೇ ಅವರು ಅಭಿನಯಕ್ಕೆ ಒಪ್ಪಿದ್ದಾರೆ.ಕನ್ನಡ ಚಿತ್ರ ಮೂಲ ಚಿತ್ರಕ್ಕಿಂದ ಅರ್ಧದಷ್ಟು ಪ್ರಮಾಣದಲ್ಲಿ ಭಿನ್ನವಾಗಿದ್ದು ಸಾಹಸ, ಥ್ರಿಲ್ಲಿಂಗ್ ಕಥೆಯೊಂದನ್ನು ಶಿವಣ್ಣನ ಅಭಿಮಾನಿಗಳು ಎದುರು ನೋಡಬಹುದು" ನಿರ್ದೇಶಕ ವಿವರಿಸಿದ್ದಾರೆ.
ಶಿವಣ್ಣನ "ಕವಚ" ಇದೇ ಜನವರಿ 18ರಂದು ಬಿಡುಗಡೆಯಾಗುತ್ತಿದ್ದು ಈ ವರ್ಷದ ಬಹು ನಿರೀಕ್ಷಿತ ಚಿತ್ರದಲ್ಲಿ ಒಂದು ಎನ್ನಲಾಗಿದೆ.ಚಿತ್ರದಲ್ಲಿ ಶಿವರಾಜ್ ಕುಮಾರ್ ದೃಷೀಹೀನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಓರ್ವ ಯುವತಿಯನ್ನು ಸರಣಿ ಹಂತಕನಿಂದ ಪಾರು ಮಾಡುವ ಪಾತ್ರ ಇದಾಗಿದೆ.
ಕೃತ್ತಿಕಾ ಜಯಕುಮಾರ್, ಇಶಾ ಕೋಪ್ಟಿಕರ್, ಬೇಬಿ ಮೀನಾಕ್ಷಿ, ವಸಿಷ್ಟ ಸಿಂಹ, ಜಯಪ್ರಕಾಶ್ ಹಾಗೂ ತಬಲ ನಾಣಿ ಸೇರಿ ಅನೇಕರು ಚಿತ್ರದಲ್ಲಿ ಕಾಣಿಸಿಕೊಳ್ಳೂತ್ತಿದ್ದಾರೆ. ಎಂವಿವಿ ಸತ್ಯನಾರಾಯಣ ಹಾಗೂ ಎ. ಸಂಪತ್ ನಿರ್ಮಾಣದಲ್ಲಿ ಹಯಗ್ರೀವ ಮೂವಿ ಅಧಿಷ್ಠಾನದ ಲಾಂಛನದಲ್ಲಿ ಚಿತ್ರ ತೆರೆಗೆ  ಆಗಮಿಸಲಿದೆ.

ಒಂದೆಡೆ ಐಟಿ ದಾಳಿ, ಇನ್ನೊಂದೆಡೆ 13 ದಿನಕ್ಕೆ 175 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ಕೆಜಿಎಫ್!


ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಬಿಡುಗಡೆಯಾದ ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ ಇದೀಗ 10ನೇ ದಿನಕ್ಕೆ 150 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿತ್ತು. ಇದೀಗ 13ನೇ ದಿನಕ್ಕೆ 175 ಕೋಟಿ ಕ್ಲಬ್ ಸೇರುವ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.
ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ 150 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರವೊಂದು ಈ ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ 175 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇನ್ನು ಚಿತ್ರ ಬಿಡುಗಡೆಯಾಗಿ 13 ದಿನ ಕಳೆದರೂ ಇನ್ನು ಚಿತ್ರವನ್ನು ನೋಡಲು ಥಿಯೇಟರ್ ಗಳತ್ತ ಪ್ರೇಕ್ಷಕರು ದಾಂಗುಡಿ ಹಿಡುತ್ತಿರುವುದರಿಂದ ಚಿತ್ರದ ಕಲೆಕ್ಷನ್ ಸಹ ಜೋರಾಗಿದೆ. 
ಕೆಜಿಎಫ್ ಚಿತ್ರ ಜಗತ್ತಿನಾದ್ಯಂತ ಒಟ್ಟಾರೆ 175 ಕೋಟಿ ರುಪಾಯಿ ಗಳಿಸಿದ್ದು ಇದರಲ್ಲಿ 138.5 ಕೋಟಿ ನೆಟ್ ಶೇರ್ ಆಗಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ವಾರದ ಅಂತ್ಯಕ್ಕೆ 7.6 ಕೋಟಿ ರುಪಾಯಿ ಗಳಿಸಿದೆ.
ಇನ್ನು ಕನ್ನಡದಲ್ಲಿ ಒಟ್ಟಾರೆ 90 ಕೋಟಿಗೂ ಹೆಚ್ಚುಕಲೆಕ್ಷನ್ ಮಾಡಿದೆ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆ. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ಒಟ್ಟಾರೆ 75 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಇದೀಗ ಈ ದಾಖಲೆಯನ್ನು ಕೆಜಿಎಫ್ ಮುರಿದಿದೆ.
ಇಲ್ಲಿಯವರೆಗೂ ಹಿಂದಿ ಆವೃತ್ತಿಯಲ್ಲಿ ಕೆಜಿಎಫ್ ಚಿತ್ರ ಒಟ್ಟಾರೆ 30.45 ಕೋಟಿ ರುಪಾಯಿ ಗಳಿಸಿರುವ ಕೆಜಿಎಫ್ ಹೊಸ ದಾಖಲೆ ನಿರ್ಮಿಸಿದೆ. 
ಇನ್ನು ಗುರುವಾರ ಬೆಳಗ್ಗೆ ಐಟಿ ಅಧಿಕಾರಿಗಳು ಸ್ಯಾಂಡಲ್ವುಡ್ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಇದರಲ್ಲಿ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ನಟ ಯಶ್ ಮನೆ ಮೇಲೂ ದಾಳಿ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್...